ಜಿಎಸ್‌ಟಿ ಅರಿವಿನ ಕಾರ್ಯಾಗಾರ

18
Published on

ಮೈಸೂರು: ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆ, ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಚೇರಿ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದಿಂದ ಭಾನುವಾರ ಜಿಎಸ್‌ಟಿ ಅರಿವಿನ ಕಾರ್ಯಾಗಾರ ಆಯೋಜಿಸಲಾಗಿತ್ತು.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ (ಆಡಳಿತ) ಪಿ.ಪರಮೇಶ್ವರಗೌಡ ಅವರು ಜಿ.ಎಸ್.ಟಿ. ಮಂಡಳಿಯ ಆಶಯದಂತೆ 2017-18 ರಿಂದ 2019-20 ನೇ ಸಾಲಿಗೆ ಜಾರಿಗೆ ತಂದಿರುವ ಕರಸಮಾಧಾನ ಯೋಜನೆ (ಆಮೇಸ್ಟಿ ಸ್ಕಿಮ್) ಅಡಿ 16(4) ರಂತೆ ತರಲಾಗಿ, ಕ್ಷೇಮು ಮಾಡಲಾದ ಹೂಡುವಳಿ ತೆರಿಗೆಗೆ ಹಾಗೂ ಇತ್ತೀಚಿನ ಬದಲಾವಣೆ ಕುರಿತು ಮಾಹಿತಿ ನೀಡಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಕೆ.ಬಿ. ಲಿಂಗರಾಜು, ಉಪಾಧ್ಯಕ್ಷ ಆರ್. ಆನಂದ್, ಗೌರವ ಕಾರ್ಯದರ್ಶಿ ಎ.ಕೆ.ಶಿವಾಜಿ ರಾವ್ ಇತರರು ಇದ್ದರು. ಒಕ್ಕೂಟದ ನೂರಕ್ಕೂ ಹೆಚ್ಚು ಜನರು ಭಾಗವಹಿಸಿ ಸಂವಾದ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net