ರಸ್ತೆ ಒತ್ತುವರಿ ತೆರವುಗೊಳಿಸಿ : ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವಂತೆ ಸಂಸದ ಜಿ.ಎಸ್.ಬಸವರಾಜು ಸೂಚನೆ

10TMK_MP 3
Published on

ತುಮಕೂರು : ನಗರದ 11ನೇ ವಾರ್ಡ್ ಮಳೆಕೋಟೆ-ಗಂಗಸಂದ್ರಕ್ಕೆ ಹೋಗುವ ರಸ್ತೆ ಒತ್ತುವರಿ ತೆರವುಗೊಳಿಸಿ, ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವಂತೆ ಸಂಸದ ಜಿ.ಎಸ್.ಬಸವರಾಜು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಮೇಳೆಕೋಟೆಯಿಂದ ಗಂಗಸಂದ್ರಕ್ಕೆ ಹೋಗುವ ರಸ್ತೆ ಸಿಡಿಪಿ ಪ್ರಕಾರ 40 ಅಡಿ ರಸ್ತೆಯಾಗಿದ್ದು,ಕೆಲವರು ರಸ್ತೆ ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡಿರುವ ಹಿನ್ನೆಲೆಯಲ್ಲಿ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ, ಮನೆಯ ಮಾಲೀಕರು ಹಾಗೂ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.

ರಸ್ತೆ ವಿಸ್ತರಣೆ ಆಗಲಿದ್ದು, ಈ ಭಾಗದ ನಿವೇಶನಗಳಿಗೆ ಉತ್ತಮ ಬೆಲೆ ಬರಲಿದೆ ಅಲ್ಲದೆ, ಒಂದು ಬಡಾವಣೆಯಿಂದ ಮತ್ತೊಂದು ಬಡಾವಣೆಗೆ ಸರಕು ಸಾಗಣೆ, ಪ್ರಯಾಣಿಕರ ವಾಹನಗಳು ಸುಗಮವಾಗಿ ಚಲಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಪೊಲೀಸರ ಸಹಕಾರದೊಂದಿಗೆ ಪಾಲಿಕೆಯ ನೌಕರರಿಂದ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಸ್ಥಳದಲ್ಲಿದ್ದ ಆಯುಕ್ತರಿಗೆ ನಿರ್ದೇಶಿಸಿದರು.

ಆಯುಕ್ತೆ ರೇಣುಕಾ ಮಾತನಾಡಿ, 40 ಅಡಿ ಅಗಲದ ಮೇಳೆಕೋಟೆ, ಗಂಗಸಂದ್ರ ರಸ್ತೆಯ ಬಹುಪಾಲು ಕೆಲಸ ಪೂರ್ಣಗೊಂಡಿದ್ದು, ಕೇವಲ 500 ಮೀಟರ್ ರಸ್ತೆ ಅಭಿವೃದ್ಧಿ ಬಾಕಿ ಇದೆ. ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿಪಡಿಸುತ್ತಿದ್ದು, ಒತ್ತುವರಿ ತೆರವುಗೊಳಿಸಿಕೊಡುವಂತೆ ಮನವಿ ಮಾಡಿದ್ದರು. ಒತ್ತುವರಿ ಮಾಡಿರುವ ಮನೆಗಳ ವಾಲೀಕರೊಂದಿಗೆ ಸಂಸದರು ಮಾತನಾಡಿದ್ದು, ಮನವೊಲಿಸುವ ಕೆಲಸ ಮಾಡಲಾಗಿದೆ. ಅವರ ನಿರ್ದೇಶನದಂತೆ ಮಂಗಳವಾರ ಪೊಲೀಸರ ಸಹಕಾರದೊಂದಿಗೆ ಒತ್ತುವರಿ ಮಾಡಿರುವ ಮನೆಗಳ ತೆರವು ಕಾರ್ಯಾಚರಣೆ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net