ಜಿ.ಎಸ್​. ಪಾಟೀಲರಿಗೆ ಸಚಿವ ಸ್ಥಾನ ನೀಡಲು ಮುಂಡರಗಿ ತಾಪಂ ಮಾಜಿ ಅಧ್ಯಕ್ಷ ಆಗ್ರಹ:

09GDG03D
Published on

ಮುಂಡರಗಿ:
ಗದಗ ಜಿಲ್ಲೆಯ ರೋಣ ಮತೇತ್ರದಿಂದ 4 ಬಾರಿಯೂ 20 ಸಾವಿರ ಮತಗಳ ಅಂತರದಿಂದ ಶಾಸಕರಾಗಿ ಆಯ್ಕೆಯಾಗಿ ಅಪಾರ ಅನುಭವ ಹೊಂದಿರುವ ಹಿರಿಯ ಶಾಸಕ ಜಿ.ಎಸ್​.ಪಾಟೀಲ್​ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಗೌರವಿಸಬೇಕಿದೆ ಎಂದು ಮುಂಡರಗಿ ತಾಲೂಕು ಪಂಚಾಯತಿಯ ಮಾಜಿ ಅದ್ಯರಾದ ವೆಂಕಪ್ಪ ಬಳ್ಳಾರಿ ಅವರು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿ.ಎಸ್​. ಪಾಟೀಲರು ಗದಗ ಜಿಲ್ಲಾ ಕಾಂಗ್ರೆಸ್​ ಸಮಿತಿಯ ಅಧ್ಯರಾಗಿ ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್​ ಪವನ್ನು ಬೇರುಮಟ್ಟದಿಂದ ಸಂಟಿಸಿದ್ದಾರೆ, ಪ್ರಸಕ್ತ ಚುನಾವಣೆಯಲ್ಲಿ ಅವರು ರೋಣಮತೇತ್ರದ ಹಾಲಿ ಶಾಸಕರಾಗಿದ್ದ ಕಳಕಪ್ಪ ಬಂಡಿ ಅವರನ್ನ 24 ಸಾವಿರ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ, 1967 ರಲ್ಲಿ ಅಂದಿನ ಕಾಂಗ್ರೆಸ್​ ಶಾಸಕರಾಗಿದ್ದ ಅಂದಾನಪ್ಪ ದೊಡ್ಡಮೆಟಿ ಅವರಿಗೆ ಸಚಿವ ಸ್ಥಾನವನ್ನು ನೀಡಲಾಗಿತ್ತು, ಸುಮಾರು 56 ವರ್ಷಗಳಿಂದ ರೋಣ ಮತೇತ್ರ ಸಚಿವ ಸ್ಥಾನದಿಂದ ವಂಚಿತವಗಿದೆ, 45 ವರ್ಷಳಿಂದ ಪ ಸಂಟನೆಯಲ್ಲಿ ತೊಡಗಿಸಿಕೊಂಡಿರುವ ಸರಳ ನೇರ ವ್ಯಕ್ತಿತ್ವದ ಮುತ್ಸದ್ದಿ ರಾಜಕಾರಣಿಯಾಗಿರುವ ಜಿ.ಎಸ್​.ಪಾಟೀಲ್​ ಅವರಿಗೆ ಆಡಳಿತ ಅನುಭವ ಜೊತೆಗೆ ಸಾಮರ್ಥ್ಯ ಇದೆ. ಆದರೂ ಅವರು ಸಚಿವ ಸ್ಥಾನದಿಂದ ವಂಚಿತರಾಗುತ್ತಿದ್ದಾರೆ, 76 ವರ್ಷವಾದರೂ ಎಳೆಯ ವಯಸ್ಸಿನ ಯುವಕರಂತೆ ಯುವ ಸಮುದಾಯ ನಚುವಂತೆ ಸಾರ್ವಜನಿಕ ರಂಗದಲ್ಲಿ ತೀವೃಗತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಾರೆ. ಇದೇ ತಮ್ಮ ಕೊನೆಯ ಚುನಾವಣೆ ಎಂದು ಕಾರ್ಯಕರ್ತರಲ್ಲಿ ಉಲ್ಲಾಸ ಮತ್ತು ಉತ್ಸಾಹ ತುಂಬಿ ಚುನಾವಣೆ ಎದುರಿಸಿ ಜಯಶಾಲಿಯಾಗಿದ್ದಾರೆ. 2018 ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಪ ಸಂಟನೆಯಲ್ಲಿ ತೊಡಗಿಸಿಕೊಂಡು ಗದಗ ಜಿಲ್ಲೆಯಲ್ಲಿ ಯಶಸ್ವಿಯಾಗಿ ಪವನ್ನು ಮುನ್ನೆಡೆಸಿದ್ದಾರೆ. ಶಾಸಕರಾದ ಜಿ.ಎಸ್​.ಪಾಟೀಲ್​ ಪ ನಿಷ್ಠೆ ಮತ್ತು ಸಂಟನಾತ್ಮಕ ಹೋರಾಟವನ್ನು ಸ್ಮರಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯ ಡಿ.ಕೆ.ಶಿವಕುಮಾರ ಹಾಗೂ 2 ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆಗಲಿರುವ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಬೇಕೆಂದು ಮುಂಡರಗಿ ತಾಲೂಕು ಪಂಚಾಯತಿಯ ಮಾಜಿ ಅದ್ಯ ವೆಂಕಪ್ಪ ಬಳ್ಳಾರಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net