ಜಿಲ್ಲೆಯ 214 ಸ್ಥಳಗಳಲ್ಲಿ ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ

udp-30-gruhalakshmi
Published on

ಉಡುಪಿ: ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿ.ಪಿ.ಎಲ್​ ಮತ್ತು ಎ.ಪಿ.ಎಲ್​ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಯಾಗಿದ್ದು, ಜಿಲ್ಲೆಯಲ್ಲಿ 2,56,850 ಪಡಿತರ ಚೀಟಿಗಳಲ್ಲಿ 2,08,695 ಫಲಾನುಭವಿಗಳು ಈ ಯೋಜನೆಗೆ ನೋಂದಾಯಿಸಿದ್ದಾರೆ. ಮುಂದಿನ 3 ದಿನಗಳಲ್ಲಿ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ಜಿಲ್ಲಾಡಳಿತ ನಗರದ ಕಿನ್ನಿಮುಲ್ಕಿ ಮಿಷನ್​ ಕಂಪೌಂಡ್​ನ ಬಾಸೆಲ್​ ಮಿಷನರಿಸ್​ ಮೆಮೋರಿಯಲ್​ ಆಡಿಟೋರಿಯಂನಲ್ಲಿ ಗೃಹಲಕ್ಷ್ಮಿ ಯೋಜನೆ ಅನುಷ್ಠ್ಠಾನ ಸಮಾರಂಭದ ನೇರ ಪ್ರಸಾರ ಹಾಗೂ ಸಮಾವೇಶದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 155 ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಹಾಗೂ ನಗರ ಸ್ಥಳಿಯ ಸಂಸ್ಥೆಯ 52 ವಾರ್ಡ್ಗಳಲ್ಲಿ ಹಾಗೂ 6 ತಾಲೂಕು ಕೇಂದ್ರಗಳಲ್ಲಿ ಮತ್ತು 1 ಜಿಲ್ಲಾ ಕೇಂದ್ರದಲ್ಲಿ ಸೇರಿದಂತೆ ಒಟ್ಟು 214 ಸ್ಥಳಗಳಲ್ಲಿ ಏಕ ಕಾಲದಲ್ಲಿ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಶಾಸಕ ಯಶ್​ಪಾಲ್​ . ಸುವರ್ಣ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ನಗರಸಭಾ ಸದಸ್ಯರಾದ ರಮೇಶ್​ ಕಾಂಚನ್​, ಅಮೃತಾಕೃಷ್ಣ್ಣಮೂರ್ತಿ, ಕೃಷ್ಣರಾವ್​ ಕೊಡಂಚ, ವಿಜಯ ಪೂಜಾರಿ, ಮುಖಂಡರಾದ ಮುನಿಯಾಲು ಉದಯ್​ ಕುಮಾರ್​ ಶೆಟ್ಟಿ, ಪ್ರಸಾದ್​ ಕಾಂಚನ್​, ಕೃಷ್ಣಮೂರ್ತಿ, ದಿನಕರ್​ ಹೆರೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net