ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಮಂಜೂರಾತಿ ಪತ್ರ ವಿತರಣೆ

Guarantee scheme
Published on

ಸವಣೂರ: ಪಟ್ಟಣದ ಸಿಡಿಪಿಒ ಕಚೇರಿಯಲ್ಲಿ ನಗರದ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ಗುರುವಾರ ಜರುಗಿತು.

ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿದ ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ ಮಾತನಾಡಿ, ಯೋಜನೆಯ ಕುರಿತು ಸೂಕ್ತ ಮಾಹಿತಿ ನೀಡಿ, ಅರ್ಜಿ ಸಲ್ಲಿಸಲು ಪ್ರೋತ್ಸಾಹ ನೀಡಬೇಕು ಎಂದರು.

ತಹಸೀಲ್ದಾರ್ ಅನಿಲಕುಮಾರ ಜಿ. ಮಾತನಾಡಿ, ಪಟ್ಟಣದಲ್ಲಿ 4 ನೋಂದಣಿ ಕೇಂದ್ರಗಳಿದ್ದು, ಪುರಸಭೆ ಕಾರ್ಯಾಲಯ, ಪುರಸಭೆ ಕಾಂಪ್ಲೆಕ್ಸ್ ಮಾರ್ಕೆಟ್ ರಸ್ತೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಧರ್ಮರಾಜ ನಗರ ಹಾಗೂ ಕರ್ನಾಟಕ ಒನ್ ಸೆಂಟರ್‌ನಲ್ಲಿ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಒಂದು ದಿನಕ್ಕೆ ಪ್ರತಿ ಕೇಂದ್ರದಲ್ಲಿ 60 ಫಲಾನುಭವಿಗಳ ನೋಂದಣಿ ಮಾಡಲಾಗುತ್ತದೆ. ನೋಂದಣಿ ಸಮಯ ಕೇಂದ್ರದ ಹೆಸರು ಸ್ಥಳದ ಬಗ್ಗೆ ಪೋನ್‌ಗೆ ಎಸ್‌ಎಂಎಸ್ ಬರುತ್ತವೆ. ಸಂದೇಶ ಬಂದ ನಂತರ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಸಬೇಕು. ತಪ್ಪಿದಲ್ಲಿ ಮರುದಿನ ಸಂಜೆ 5 ರಿಂದ 7 ಗಂಟೆಯೊಳಗೆ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ಆಲದರ್ತಿ ಅವರು ಯೋಜನೆಯ ಅನುಷ್ಠಾನ ಕುರಿತು ವಿವರಿಸಿದರು. ಸಿಡಿಪಿಒ ಉಮಾ ಕೆ.ಎಸ್., ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net