ಗೃಹಜ್ಯೋತಿ ಚಾಲನೆ ಕಾರ್ಯಕ್ರಮದಲ್ಲಿ ಭರ್ಜರಿ ಊಟ

IMG-20230805-WA0013
Published on

ಕಲಬುರಗಿ: ನಗರದ ಎನ್.ವಿ‌.ಮೈದಾನದಲ್ಲಿ ಆಯೋಜಿಸಿರುವ "ಗೃಹ ಜ್ಯೋತಿ" ಚಾಲನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು, ಫಲಾನುಭವಿಗಳಿಗೆ ನಗರದ ಎನ್.ವಿ.ಮೈದಾನದಲ್ಲಿ ಊಟಕ್ಕೆ ಸಕಲ ವ್ಯವಸ್ಥೆ ಮಾಡಿದ್ದು, ಸರತಿಯಲ್ಲಿ ನಿಂತು ಸಾರ್ವಜನಿಕರು ಊಟ ಸವಿದರು.

ಮಹಿಳೆಯರು ಮತ್ತು ಪುರುಷರು ತಂಡಗಳು ಎನ.ವಿ.ಮೈದಾನದತ್ತ ಧಾವಿಸುತ್ತಿವೆ. ತಂಡೋಪವಾಗಿ ಊಟ ಸವಿಯುತ್ತಿರುವ ಚಿತ್ರ ಸಾಮಾನ್ಯವಾಗಿವೆ.

ಊಟಕ್ಕೆ ಲಡ್ಡು, ಪಲಾವ್, ಸಾಂಬಾರ್ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಜನಸಂದಣಿ ಆಗದಂತೆ ಹತ್ತಾರು ಕೌಂಟರ್ ಸ್ಥಾಪಿಸಲಾಗಿದೆ, ಜನರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಪೌರ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಸ್ವಚ್ಛತಾ ವಾಹಿನಿಗಳು ನಿರಂತರ ಸ್ವಚ್ಚತಾ ಕಾರ್ಯದಲ್ಲಿ ತೊಡಗಿವೆ. ಒಟ್ಟಾರೆಯಾಗಿ ಊಟದ ಸ್ಥಳದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಅದ್ಯತೆ ನೀಡಿರುವುದು ಇಲ್ಲಿ ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net