ನಗರದಲ್ಲಿ ಬಿಎಂ ರಸ್ತೆಯಲ್ಲಿ ಜಿಆರ್‌ಟಿ ಜ್ಯುವೆಲ್ಲರ್ಸ್ ಶೋರೂಂ ಆರಂಭ

10_HSN_04
Published on

ಹಾಸನ: ಹಾಸನ ನಗರದಲ್ಲಿ 62ನೇ ಶೋರೂಂ ಅನ್ನು ಪ್ರಾರಂಭಿಸುವುದರೊಂದಿಗೆ ಜಿಆರ್‌ಟಿ ಜ್ಯುವೆಲ್ಲರ್ಸ್ ತನ್ನ 60 ವರ್ಷಗಳ ಪ್ರಯಾಣದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. 1964ರಿಂದ ಕಲಾತ್ಮಕತೆ, ನಂಬಿಕೆ ಮತ್ತು ನಾವೀನ್ಯತೆ ಹೆಸರುವಾಸಿಯಾದ ಈ ಬ್ರಾೃಂಡ್ ತಲೆತಲಾಂತರಗಳಿಂದ ಅತ್ಯುತ್ತಮ ಆಭರಣಗಳನ್ನು ನೀಡುತ್ತಾ ಬಂದಿದೆ.

ದಕ್ಷಿಣ ಭಾರತ ಮತ್ತು ಸಿಂಗಾಪುರದಾದ್ಯಂತ ಬಲವಾದ ಗ್ರಾಹಕ ಜಾಲವನ್ನು ಹೊಂದಿರುವ ಜಿಆರ್‌ಟಿ ಜ್ಯವೆಲ್ಲರ್ಸ್ ಎಲ್ಲ ಸಾಂಪ್ರದಾಯಿಕ ಮತ್ತು ಆಧುನಿಕ ಆಭರಣಗಳ ಖರೀದಿಗೆ ಆದ್ಯತೆಯ ಗಮ್ಯಸ್ಥಾನವಾಗಿದೆ. ಹಾಸನದ ಆಭರಣ ಪ್ರಿಯರಿಗೆ ತನ್ನ ಕರಕುಶಲತೆಯ ಮೂಲಕ ಸೆಳೆಯಲಿದ್ದು, ಚಿನ್ನ, ವಜ್ರ, ಪ್ಲಾಟಿನಂ, ಬೆಳ್ಳಿ ಸಾಮಗ್ರಿಗಳು, ಬೆಳ್ಳಿ ಆಭರಣಗಳು ಮತ್ತು ರತ್ನದ ಕಲ್ಲುಗಳ ವೈವಿಧ್ಯಮಯ ಸಂಗ್ರಹವನ್ನು ಪರಿಚಯಿಸಿದೆ.

ಬೆಂಗಳೂರು-ಮಂಗಳೂರು ಹೋಗುವ ರಸ್ತೆಯ, ಹಾಸನ ಕ್ಲಬ್ ಬಳಿ ಇರುವ ಹೊಸ ಶೋರೂಮ್, ಕಲಾತೀತ ಮತ್ತು ಪ್ರಾದೇಶಿಕವಾಗಿ ಪ್ರೇರಿತ ವಿನ್ಯಾಸಗಳ ವ್ಯಾಪಕ ಶ್ರೇಣಿಯೊಂದಿಗೆ ಪ್ರೀಮಿಯಂ ಶಾಪಿಂಗ್ ಅನುಭವವನ್ನು ಒದಗಿಸಲು ಸಿದ್ಧಗೊಂಡಿದೆ.

ಹಾಸನದಲ್ಲಿ ತನ್ನ ಶುಭಾರಂಭದ ಆಚರಣೆಯ ಭಾಗವಾಗಿ ಜಿಆರ್‌ಟಿ ಜ್ಯುವೆಲ್ಲರ್ಸ್ ಗ್ರಾಹಕರಿಗೆ ಸೀಮಿತ ಅವಧಿಯ ಕೊಡುಗೆಗಳನ್ನು ಘೋಷಿಸಿದೆ. ಖರೀದಿದಾರರು ಚಿನ್ನದ ಆಭರಣ ಖರೀದಿಯ ಮೇಲೆ ಪ್ರತಿ ಗ್ರಾಂಗೆ 300 ರೂ. ರಿಯಾಯಿತಿ ಮತ್ತು ವೇಸ್ಟೇಜ್ ಶುಲ್ಕದ ಮೇಲೆ ಶೇ.20 ರಿಯಾಯಿತಿ ಪ್ರಯೋಜನವನ್ನು ಪಡೆಯಬಹುದು. ಹೆಚ್ಚುವರಿಯಾಗಿ ಹಳೆಯ ಚಿನ್ನದ ಆಭರಣಗಳನ್ನು ವಿನಿಮಯ ಮಾಡಿಕೊಳ್ಳುವವರು ಪ್ರತಿ ಗ್ರಾಂಗೆ ರೂ.75 ಹೆಚ್ಚುವರಿ ಲಾಭವನ್ನು ಪಡೆಯುತ್ತಾರೆ. ಹಾಗೆಯೇ ವಜ್ರ ಖರೀದಿದಾರರು ಪ್ರತಿ ಕ್ಯಾರೆಟ್‌ಗೆ 10,000 ರೂ. ರಿಯಾಯಿತಿ, ಬೆಳ್ಳಿ ಸಾಮಗ್ರಿಗಳು ಮತ್ತು ಕಾಲು ಗೆಜ್ಜೆ ತಯಾರಿಕೆಯ ಶುಲ್ಕದ ಮೇಲೆ ಶೇ.25 ರಿಯಾಯಿತಿ ಮತ್ತು ಅನ್‌ಕಟ್ ಡೈಮಂಡ್ ಮೌಲ್ಯದ ಮೇಲೆ ಶೇ.10ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಬ್ರಾೃಂಡ್ ತನ್ನ ಆಭರಣ ಖರೀದಿ ಯೋಜನೆಯ ಮೂಲಕ ವಿಶೇಷ ಉಡುಗೊರೆ ಜತೆಗೆ ಗಿಫ್ಟ್ ಬೊನಾನ್ಜಾವನ್ನು ಸಹ ಪರಿಚಿಯಿಸಿದೆ. ಇದರಿಂದಾಗಿ ಗ್ರಾಹಕರು ಡಬಲ್ ಉಡುಗೊರೆಗಳನ್ನು ಪಡೆಯಬಹುದು. ಈ ಕೊಡುಗೆಗಳು ಮಾ.23ರವರೆಗೆ ಹೊಸದಾಗಿ ತೆರೆಯಲಾದ ಶೋರೂಂನಲ್ಲಿ ಲಭ್ಯವಿರುತ್ತದೆ.

ಜಿಆರ್‌ಟಿ ಜ್ಯುವೆಲ್ಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಆರ್. ಆನಂದ್ ಅನಂತಪದ್ಮನಾಭನ್ ಅವರು ‘ಸುಂದರವಾದ, ಬೆಳೆಯುತ್ತಿರುವ ಸಮುದಾಯದ ಭಾಗವಾಗಲು ಈ ಉದ್ಘಾಟನೆಯನ್ನು ನಾವು ಮತ್ತೊಂದು ಅವಕಾಶವೆಂದು ಪರಿಗಣಿಸುತ್ತೇವೆ. ಹಾಸನದ ಶ್ರೀಮಂತ ಪರಂಪರೆ ಮತ್ತು ಸಂಪರ್ಕವು ನಮ್ಮ ವಿಶಿಷ್ಟ ವಿನ್ಯಾಸಗಳನ್ನು ಗ್ರಾಹಕರಿಗೆ ಪರಿಚಯಿಸಲು ಸೂಕ್ತ ಸ್ಥಳವಾಗಿದೆ.’ ಎಂದು ಹೇಳಿದರು.

ಜಿಆರ್‌ಟಿ ಜ್ಯುವೆಲ್ಲರ್ಸ್‌ನ ಮತ್ತೋರ್ವ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಆರ್. ರಾಧಾಕೃಷ್ಣನ್ ಅವರು ಮಾತನಾಡಿ, ‘ದಶಕಗಳಿಂದ ಕಾಲದ ಪರೀಕ್ಷೆಯಲ್ಲಿ ಜಯಿಸುವ ಆಭರಣಗಳನ್ನು ತಯಾರಿಸಲು ನಾವು ಬದ್ಧರಾಗಿದ್ದೇವೆ. ಈ ಶೋರೂಂ ಆ ಬದ್ಧತೆಯ ಪ್ರತಿಬಿಂಬವಾಗಿದೆ. ಏಕೆಂದರೆ ಕರ್ನಾಟಕದ ಶ್ರೀಮಂತ ಕಲಾತ್ಮಕತೆ ಮತ್ತು ಕರಕುಶಲತೆಯನ್ನು ಇನ್ನಷ್ಟು ಹೊರತರಲು ನಾವು ಆಶಿಸುತ್ತೇವೆ,’ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net