ಬಾಹ್ಯಾಕಾಶದಲ್ಲಿ ಕೆಲಸ ಮಾಡುವ ಮಟ್ಟಕ್ಕೆ ಬೆಳವಣಿಗೆ

Svr Kanunu
Published on

ಸವಣೂರ: ಮನೆಗೆ ಸಿಮೀತವಾಗಿದ್ದ ಮಹಿಳೆ ಬಾಹ್ಯಾಕಾಶದಲ್ಲಿ ಕೆಲಸ ಮಾಡುವ ಮಟ್ಟಿಗೆ ಬೆಳೆದಿದ್ದಾರೆ ಎಂದು ಹತ್ತಿಮತ್ತೂರ ವಿರಕ್ತಮಠದ ಶ್ರೀ ನಿಜಗುಣ ಶಿವಯೋಗಿ ಸ್ವಾಮೀಜಿ ಹೇಳಿದರು.

ಮಹಿಳಾ ದಿನಾಚರಣೆಯ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘದ ವತಿಯಿಂದ ತಾಲೂಕಿನ ಹತ್ತಿಮತ್ತೂರ ಗ್ರಾಮದ ಚೌತಿಮನಿ ಕಟ್ಟೆಯಲ್ಲಿ ಗುರುವಾರ ಏರ್ಪಡಿಸಿದ್ದ ಮಹಿಳಾ ಗ್ರಾಮಸಭೆ, ಕಾನೂನು ಅರಿವು-ನೆರವು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಾಧನೆಗೆ ಮುಂದಾಗುತ್ತಿರುವ ಮಹಿಳೆಯರು ಸಾಮಾನ್ಯ ಕಾನೂನು ಹಾಗೂ ಆರ್ಥಿಕ ನೀತಿ ಕುರಿತು ಅರಿವು ಹೊಂದಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜೆಎಂಎ್ಸಿ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಎಸ್.ಎನ್. ಮಾತನಾಡಿ, ತಾಯಂದಿರು ಹೆಣ್ಣು ಮಗುವಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು ಎಂದರು.

ಎಪಿಪಿ ಎ್.ಎಂ. ಹಾದಿಮನಿ, ವಕೀಲ ಎಸ್.ಬಿ. ಬಿಷ್ಠನಗೌಡ್ರ ಉಪನ್ಯಾಸ ನೀಡಿದರು. ಸಾಮಾಜಿಕ ಕಾರ್ಯಕರ್ತೆ ಅಕ್ಷತಾ ಕೆ.ಸಿ. ಅವರು ಮಹಿಳೆಯರ ಹಕ್ಕು ಹಾಗೂ ರಾಜಕೀಯ ಸಮಾನತೆ ಕುರಿತು ವಿವರಿಸಿದರು.

ಸವಣೂರ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಆರ್. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಪುಷ್ಪಾ ಭೋಳಕಟ್ಟಿ, ಪಿಡಿಒ ಪಿ.ಸಿ. ಸಂಕಪ್ಪನವರ, ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕವಿತಾ ಕುಳೇನೂರ, ವಕೀಲ ಲಿಂಗರಾಜ ರೊಡ್ಡಣ್ಣನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net