ಬಸವಳಿದ ಅಡಕೆ, ಬಾಳೆ ತೋಟ

tota
Published on

ಯಲ್ಲಾಪುರ: ವಿಪರೀತ ಬಿಸಿಲು, ಅಂತರ್ಜಲ ಮಟ್ಟ ಕುಸಿತ, ನೀರಿನ ಕೊರತೆ ಇತ್ಯಾದಿ ಕಾರಣಗಳಿಂದಾಗಿ ತಾಲೂಕಿನ ವಿವಿಧ ಭಾಗಳಲ್ಲಿ ಅಡಕೆ, ಬಾಳೆ ತೋಟಗಳು ಬಸವಳಿದಿವೆ.

ಬಿಸಿಲಿನ ಹೊಡೆತಕ್ಕೆ ಹೊಸದಾಗಿ ನೆಟ್ಟ ಅಡಕೆ, ತೆಂಗು, ಬಾಳೆ ಗಿಡಗಳು ಒಣಗಿ ನಿಂತಿವೆ. ಕಳೆದ ಮಳೆಗಾಲದಲ್ಲಿ ಸಾಕಷ್ಟು ಮಳೆಯಾಗದಿರುವುದು ರೈತಾಪಿ ವರ್ಗದವರನ್ನು ಹೈರಾಣಾಗಿಸಿದೆ. ಇದರಿಂದ ನೀರಿನ ಕೊರತೆ ಬಹುತೇಕ ಎಲ್ಲೆಡೆ ಕಾಣಿಸಿಕೊಂಡಿದೆ. ಹೊಸದಾಗಿ ಮಾಡಿದ ಅಡಕೆ ತೋಟ ಒಣಗಿದ್ದು, ಹಳೆಯ ತೋಟಗಳಲ್ಲಿ ಬಹುತೇಕ ಸಿಂಗಾರ ಒಣಗಿದೆ. ಅಡಕೆ ಮುಗುಡು ಉದುರಿ ನಷ್ಟ ಉಂಟಾಗುವ ಅಪಾಯ ಇದೆ.

ಕುಡಿಯುವ ನೀರಿಗೇ ತತ್ವಾರ ಆಗಿರುವಾಗ ತೋಟಕ್ಕೆ ನೀರು ಹಾಯಿಸುವುದು ಹೇಗೆಂಬ ಆತಂಕ ರೈತರಿಗೆ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net