ಗಿಡ-ಮರ ಬೆಳೆದರೆ ಆರೋಗ್ಯ ಪ್ರಾಪ್ತಿ

h24-shivu menasinakai
Published on

ಹುಬ್ಬಳ್ಳಿ: ಇಲ್ಲಿಯ ವಾರ್ಡ್ 67ರ ಶ್ರೀ ಗುರುಸಿದ್ದೇಶ್ವರ ಕಲ್ಯಾಣ ಮಂಟಪದ ರಸ್ತೆಯಿಂದ ಪಿ.ಬಿ. ರಸ್ತೆ ವರೆಗೆ ‘ಏಕ್ ಪೇಡ್ ಮಾ ಕೇ ನಾಮ್’ ಅಭಿಯಾನದ ಅಂಗವಾಗಿ ಸುಮಾರು 20ಕ್ಕೂ ಹೆಚ್ಚು ಸಸಿಗಳನ್ನು ಭಾನುವಾರ ನೆಡಲಾಯಿತು.

ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಮಾತನಾಡಿ, ಕೇವಲ ಸಸಿ ನೆಡುವುದಷ್ಟೇ ಅಲ್ಲ ಅದಕ್ಕೆ ಪ್ರತಿ ದಿನ ನೀರುಣಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ರಕ್ಷಣೆ ನಮ್ಮ ಹಕ್ಕಾಗಬೇಕು. ಗಿಡ-ಮರಗಳು ಬೆಳೆದರೆ ಮನುಷ್ಯ ಆರೋಗ್ಯದಿಂದ ಜೀವಿಸಬಲ್ಲ ಎಂಬುದನ್ನು ಅರಿತವರು ಮಾತ್ರ ಇಂಥ ಕಾರ್ಯ ಮಾಡಲು ಸಾಧ್ಯ ಎಂದರು.

ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆ, ವಾರ್ಡ್ ಅಧ್ಯಕ್ಷ ಸುಭಾಸ ಅಥಣಿ, ಮಹಾನಗರ ಜಿಲ್ಲಾ ವಕ್ತಾರ ರಾಜು ಕೋರ್ಯಾಣಮಠ, ಪೂರ್ವ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಅನೂಪ ಬಿಜವಾಡ, ರಂಗಾ ಕಠಾರೆ, ಪೂರ್ವ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ಕುಬಸದ, ಮಹಾಲಿಂಗಪ್ಪ ಹರ್ತಿ, ಕುಮಾರಗೌಡ ಪಾಟೀಲ, ಅಣ್ಣಪ್ಪ ಗೋಕಾಕ, ಮಂಜುನಾಥ ಬಿಜವಾಡ, ಗಣೇಶ ಅಮರಾವತಿ, ಬಸವರಾಜ ಛಬ್ಬಿ, ಹಿತೇಶ ಜೈನ್, ಅನುರಾಧಾ ಚಿಲ್ಲಾಳ, ಶೋಭಾ ನಾಕೋಡ, ಸಂಗಪ್ಪ ಕೂಕನೂರ, ಬಸವರಾಜ ಜಾಬೀನ, ನೀಲಕಂಠ ತಡಸದಮಠ, ಆರೋಗ್ಯ ನೀರಿಕ್ಷಕಿ ಜ್ಯೋತಿ ನರೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net