ನೆಟ್ಟ ಸಸಿಗಳನ್ನು ಜೋಪಾನವಾಗಿ ಬೆಳೆಸಿ

New Kims mla New
Published on

ಹುಬ್ಬಳ್ಳಿ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಲ್ಲಿನ ಕೆಎಂಸಿಆರ್​ಐ ಆವರಣದಲ್ಲಿ ಏರ್ಪಡಿಸಿದ್ದ ವೃಕ್ಷಾರೋಪಣಾ ಕಾರ್ಯಕ್ರಮಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವ ಪರಿಸರ ದಿನದ ನಿಮಿತ್ತ ಸಸಿ ನೆಟ್ಟರಷ್ಟೇ ಸಾಕಾಗುವುದಿಲ್ಲ. ನೆಟ್ಟ ಸಸಿಗಳನ್ನು ಜೋಪಾನದಿಂದ ಬೆಳೆಸಬೇಕು. ಹುಬ್ಬಳ್ಳಿ ಪೂರ್ಣವಾಗಿ ಹಸಿರಿನಿಂದ ಕಂಗೊಳಿಸಬೇಕು ಎಂದರು.

ಹಿರಿಯ ವೈದ್ಯರಾದ ಡಾ. ಜಿ.ಬಿ. ಸತ್ತೂರ, ಡಾ. ಸಚಿನ ಹೊಸಕಟ್ಟಿ, ಡಾ. ಕೆ.ಎಫ್. ಕಮ್ಮಾರ, ಡಾ. ಉದಯ ಬಂಡೆ, ಡಾ. ಅವಿನಾಶ ಪಾಟೀಲ, ಡಾ. ಚೈತ್ರಾ, ಡಾ. ದೀಪ್ತಿ ಹೊಸಕಟ್ಟಿ, ಕಿರಣ ಉಪ್ಪಾರ, ಶಿವಪ್ರಸಾದ ಅನ್ವೇರಿ, ವಿಜಯ ಹಿರೇಮಠ, ನವೀನ ಹತ್ತಿಬೆಳಿಗಲ್, ಇತರರು ಪಾಲ್ಗೊಂಡು ಸಸಿ ನೆಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net