

ವಿಜಯಪುರ : ನಗರದ ಮಾರ್ಗದರ್ಶಿ ಸಮೂಹ ಸಂಸ್ಥೆಯ ಎಸ್ಬಿಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದ ಪ್ರಾಚಾರ್ಯ ಜಿ.ಜೆ. ಹತ್ತಳ್ಳಿ ಮಾತನಾಡಿ, ಕಾಡು ಬೆಳೆಸಿ ನಾಡು ಉಳಿಸಿ ಹೆಚ್ಚು ಹೆಚ್ಚು ಸಸಿಗಳನ್ನು ನೆಡುವುದರ ಮೂಲಕ ಪರಿಸರ ಸಂರಸಬಹುದೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಉಪನ್ಯಾಸಕ ಛತ್ರಪ್ಪ ಭಜಂತ್ರಿ ಮಾತನಾಡಿ, ಕಾಡು ಬೆಳೆದರೆ ನಾಡು ಉಳಿದೀತು. ಪ್ರತಿಯೊಂದು ಜೀವ ಸಂಕುಲ ಉಳಿವಿಗಾಗಿ ಹಾಗೂ ಮಾಲಿನ್ಯ ಮುಕ್ತವಾಗಿ ಸದೃಢ ಕಾಯವಂತರಾಗಿ ಬದುಕು ಸಾಗಿಸಲು ಪರಿಸರವನ್ನು ಸಂರಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಪ್ರಾಚಾರ್ಯ ಜಿ.ಜೆ. ಹತ್ತಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರು ಮಾಳಪ್ಪ ಸಿದ್ನಾತ, ವಿಜಯಲ್ಮ ಕೆಂಗನಾಳ, ಗೀತಾ ದನ್ಯಾಳ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.
ಅರ್ಚನಾ ಮಾಳಿ ಪ್ರಾರ್ಥನೆ ಹಾಡಿದರು. ದೀಪಿಕಾ ಸ್ವಾಗತಿಸಿದರು, ಅರವಿಂದ ವಜ್ಜಲ ನಿರೂಪಿಸಿದರು, ಸೌಂದರ್ಯ ಇಟ್ಟಪ್ಪಗೊಳ ವಂದಿಸಿದರು.