ಸಿರಿಧಾನ್ಯ ಬೆಳೆದು ಸಿರಿವಂತರಾಗಿ

26Anand6
Published on

ಬೆಳಗಾವಿ:ರೈತರು ಬಹುಬೇಡಿಕೆ ಇರುವ ಸಿರಿಧಾನ್ಯ ಬೆಳೆಯುವುದರ ಜತೆಗೆ ಉತ್ತಮ ಆದಾಯ ಗಳಿಸಬಹುದು ಎಂದು ಮತ್ತಿಕೊಪ್ಪದ ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಸಲಹೆ ನೀಡಿದರು.

ಯರಗಟ್ಟಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಡಾ.ಪ್ರಭಾಕರ ಕೋರೆ 78ನೇ ಜನ್ಮದಿನ ಅಂಗವಾಗಿ ಐಸಿಎಆರ್​&ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರ, ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ ಹಾಗೂ ಪರಿಶಿಷ್ಟ ಜಾತಿ ಉಪಯೋಜನೆಯಡಿ ಸಿರಿಧಾನ್ಯ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದಬಸನ್ನವರ ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಎಸ್​.ಎಸ್​.ಹಿರೇಮಠ, ಜಿ.ಬಿ.ವಿಶ್ವನಾಥ, ಹೈದರಾಬಾದ್​ ಐಸಿಎಆರ್​&ಐಐಎಂಆರ್​ ವಿಜ್ಞ್ಞಾನಿ ಡಾ.ಸೂಗಣ್ಣ ದಿನ್ನಿ, ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ, ಶಂಕರ ಇಟ್ನಾಳ, ಡಿ.ಟಿ.ಜಾಧವ, ಮಹಾಂತೇಶ ಗದಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net