ನಾವೆಲ್ಲರೂ ಬದುಕಲು ಮರಗಿಡ ಬೆಳೆಸಿ, ಉಳಿಸಿ

12-.kkr3(9-24
ಕಿಕ್ಕೇರಿ ಕೆಪಿಎಸ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ವನಸಂವರ್ಧನೆ ಕಾರ್ಯಕ್ರಮದಡಿ ಗಿಡ ನೆಟ್ಟು ಜಾಗೃತಿ ಮೂಡಿಸಲಾಯಿತು. ಎಂ.ವಿ.ಭಾರತಿ, ದೊರೆಸ್ವಾಮಿ, ಚಲುವನಾರಾಯಣಸ್ವಾಮಿ, ಪುಟ್ಟಸ್ವಾಮಿ, ಕುಮಾರಸ್ವಾಮಿ, ಮಮತಾ ಇದ್ದರು.
Published on

ಕಿಕ್ಕೇರಿ: ನಮ್ಮೆಲ್ಲರ ಆರೋಗ್ಯಕರ ಬದುಕು ಮರಗಿಡಗಳ ಬೆಳೆಸುವಲ್ಲಿದ್ದು, ಮರಗಿಡ ಬೆಳೆಸಿ ಉಳಿಸಿ ಎಂದು ಎಂದು ತಾಲೂಕು ವಲಯ ಅರಣ್ಯಾಧಿಕಾರಿ ಎಂ.ವಿ. ರೇವತಿ ತಿಳಿಸಿದರು.


ಇಲ್ಲಿನ ಕೆಪಿಎಸ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕ, ಐಡಿಎಫ್‌ಸಿ ಫಸ್ಟ್ ಭಾರತ್ ಬ್ಯಾಂಕ್, ಸಾಮಾಜಿಕ ವಲಯ ಅರಣ್ಯ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವನಸಂವರ್ಧನೆ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿ, ಮರಗಿಡಗಳಿಲ್ಲದೆ ಶುದ್ದ ಗಾಳಿ ಸಿಗದೆ ಉಸಿರಾಟದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಗಳು ಹುಟ್ಟಿನಿಂದಲೇ ಬರುವಂತಾಗಿದೆ. ಕಾಡು ನಾಡಾಗಿ ಕಾಡುಪ್ರಾಣಿಗಳು ಆಹಾರಕ್ಕಾಗಿ ನಗರಕ್ಕೆ ನುಗ್ಗುವಂತಾಗಿದೆ. ಮರಗಿಡ ಬೆಳೆಸಿದ್ದಲ್ಲಿ ಮುಂದಿನ ಭವಿಷ್ಯ ಉತ್ತಮವಾಗಲು ಸಾಧ್ಯ ಎಂದರು.
ಐಡಿಎಫ್‌ಸಿ ಫಸ್ಟ್ ಭಾರತ್ ಬ್ಯಾಂಕ್ ಕೆಪಿಎಸ್ ಶಾಲೆ ಪರಿಸರದಲ್ಲಿ ಮಕ್ಕಳ ಸಹಕಾರದೊಂದಿಗೆ ವಿವಿಧ ಜಾತಿಯ ನೂರಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಮಾಡಿದರು.


ಶಾಲಾ ಕಾಲೇಜು ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತು ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು.

ಬ್ಯಾಂಕ್‌ನ ರಾಜ್ಯ ಮುಖ್ಯ ವ್ಯವಸ್ಥಾಪಕ ಪುಟ್ಟಸ್ವಾಮಿ, ಪ್ರಾಂಶುಪಾಲ ದೊರೆಸ್ವಾಮಿ, ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಮುಖ್ಯಶಿಕ್ಷಕಿ ಮಮತಾ, ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ, ಉಪವಲಯ ಅರಣ್ಯಾಧಿಕಾರಿ ರಮೇಶ್, ರಾಘವೇಂದ್ರ, ಪ್ರಮೋದ್, ಶಿವಸಿದ್ದು, ಮಹೇಶ್, ಗಸ್ತು ವನಪಾಲಕರಾದ ಅಭಿಲಾಷ್, ಮಂಜುನಾಥ್, ದಿನೇಶ್, ಪ್ರಶಾಂತ್, ವಾಚರ್ ರವಿಕುಮಾರ್, ಶ್ರೀನಿವಾಸ್, ಶಿಕ್ಷಕರಾದ ಎಸ್.ಎಂ. ಬಸವರಾಜು, ಚಿಮ್ಮಲ್, ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net