

ಕುಂಬಳೆ: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಪ್ರತಿಭಾ ಪ್ರದರ್ಶನ ಹಾಗೂ ಕ್ರೀಡೋತ್ಸವ ಗುರುವಾರ ಅಪರಾಹ್ನ ಧರ್ಮತ್ತಡ್ಕದ ಶ್ರೀದುರ್ಗಾಪರಮೇಶ್ವರಿ ಪ್ರೌಢಶಾಲಾ ಸಭಾಭವನದಲ್ಲಿ ನಡೆಯಿತು.
ವಲಯಾಧ್ಯಕ್ಷ ಕುಮಾರಸುಬ್ರಹ್ಮಣ್ಯ ಕೊಂದಲಕಾಡು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಬಂಧಕ ಶಂಕರನಾರಾಯಣ ಭಟ್ ನೇರೋಳು ಶುಭಹಾರೈಸಿದರು. ವಿದ್ಯಾರ್ಥಿವಾಹಿನಿ ಹಾಗೂ ಯುವ ವಿಭಾಗದವರಿಗೆ ವಿವಿಧ ಸ್ಪರ್ಧೆ ನಡೆಸಲಾಯಿತು. ಶಿಕ್ಷಕ ಅಧ್ಯಾಪಕ ಪಳ್ಳತ್ತಡ್ಕ ತೀರ್ಪುಗಾರರಾಗಿದ್ದರು.
ಸಮಾರೋಪದಲ್ಲಿ ನಂತೂರು ಶ್ರೀಭಾರತೀ ಕಾಲೇಜಿನ ಕಾರ್ಯದರ್ಶಿ ಶ್ರೀಕೃಷ್ಣ ಭಟ್ ನೀರಮೂಲೆ ಭಾಗವಹಿಸಿದ್ದರು. ವಿವಿಧ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಗುಂಪೆ ವಲಯ ಸೇವಾ ಪ್ರಧಾನ ಶಾಮ ಪ್ರಕಾಶ್ ಪುಣಿಯೂರು ಬಹುಮಾನ ನೀಡಿದರು. ಗುಂಪೆ ವಲಯ ಉಪಾಧ್ಯಕ್ಷ ಲಲಿತಾ ಮಾಣಿ, ಜಯರಾಮ ಭಟ್ ಬಾಳಿಕೆ, ಧರ್ಮತ್ತಡ್ಕ ಎ.ಯು.ಪಿ. ಶಾಲಾ ಮುಖ್ಯಶಿಕ್ಷಕ ಮಹಾಲಿಂಗ ಭಟ್ ನೇರೋಳು, ನರಸಿಂಹರಾಜ ಪಯ ವೇದಿಕೆಯಲ್ಲಿದ್ದರು.
ಆತ್ಮಿಕಾ ಗುಂಪೆ ಪ್ರಾರ್ಥಿಸಿದರು. ಸಾಮೂಹಿಕ ಹನುಮತ್ಪಂಚರತ್ನ ಸ್ತೋತ್ರ ಪಠಣ ನಡೆಯಿತು. ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಸ್ವಾಗತಿಸಿದರು. ಸಾತ್ವಿಕ್ ನೀರಮೂಲೆ ಕಾರ್ಯಕ್ರಮ ನಿರ್ವಹಿಸಿದರು.