ಸಂಗೀತದೊಂದಿಗೆ ಸಾಮೂಹಿಕ ಧ್ಯಾನ

new pyramid new
Published on

ಹುಬ್ಬಳ್ಳಿ : ಬುದ್ಧ ಪೂರ್ಣಿಮಾ ಉತ್ಸವ ಅಂಗವಾಗಿ ಇಲ್ಲಿನ ನೃಪತುಂಗ ಬೆಟ್ಟ ಸಮೀಪದ ಪಿರಾಮಿಡ್​ನಲ್ಲಿ ಮೇ 12ರಂದು ಬೆಳಗಿನಜಾವ 5 ರಿಂದ 8 ಗಂಟೆಯವರೆಗೆ ಸಂಗೀತದೊಂದಿಗೆ ಸಾಮೂಹಿಕ ಧ್ಯಾನ ಹಾಗೂ 10.30 ರಿಂದ ಸಂಜೆ 5 ಗಂಟೆಯವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಹುಬ್ಬಳ್ಳಿ ಪಿರಾಮಿಡ್ ಧ್ಯಾನಿಗಳ ಸಂಘದ ಪಿರಾಮಿಡ್ ಮಾಸ್ಟರ್ ವಿಶಾಲಾಕ್ಷಿ ಆಕಳವಾಡಿ, ಬೆಳಗ್ಗೆ 8 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. 10.30 ರಿಂದ ಮಧ್ಯಾಹ್ನ 1.30 ಹಾಗೂ 3 ರಿಂದ 4 ಗಂಟೆಯವರೆಗೆ ರವರೆಗೆ ವಿಶೇಷ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 4ರಿಂದ 5 ಗಂಟೆಯವರೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಅಂದಾಜು 2 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಬೇರೆಡೆಯಿಂದ ಬಂದವರಿಗೆ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

ಪರಮಾನಂದವಾಡಿಯ ಸದ್ಗುರು ಡಾ. ಅಭಿನವ ಬ್ರಹ್ಮಾನಂದ ಗುರೂಜಿ ಸಾನ್ನಿಧ್ಯ ವಹಿಸುವರು. ಬಂಡಿವಾಡದ ಸದ್ಗುರು ಸಮರ್ಥ ಡಾ. ಎ.ಸಿ. ವಾಲಿ, ಬೆಂಗಳೂರಿನ ಬ್ರರ್ಹ¾ ಪ್ರೇಮನಾಥ, ಧ್ಯಾನ ತರಬೇತುದಾರ ಅಯ್ಯಪ್ಪ ಪಿಂಡಿ, ಹೊಸಪೇಟೆಯ ಡಾ. ಹರಿಶಂಕರ, ಮೈಸೂರಿನ ಮನೋರಮಾ, ಚಿಕ್ಕೋಡಿಯ ಡಾ. ಜೀವನಧರ ಕೆಥಪ್ಪನವರ, ಬಳ್ಳಾರಿಯ ಗೀತಾ ಯಾದವ, ಕೊಟ್ಟೂರಿನ ಉಮರಾಣಿ ಅವರು ವಿಶೇಷ ಉಪನ್ಯಾಸ ನೀಡುವರು. ಹುಬ್ಬಳ್ಳಿ ಪಿರಾಮಿಡ್ ಧ್ಯಾನಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.

ನೀಲಕಂಠ ಆಕಳವಾಡಿ, ಚನ್ನು ಹೊಸಮನಿ, ಬಸವರಾಜ ಹೊಸಮನಿ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net