‘ಗ್ರೂಪ್ ಫೋಕಸ್’ ಸಂದೇಶ ಕಾರ್ಯಕ್ರಮ

1
Published on

ಮುಳ್ಳೇರಿಯ: ಮಾದಕ ದ್ರವ್ಯಗಳ ವಿರುದ್ಧ ಆಲ್ ಕೇರಳ ಫೋಟೋಗ್ರಾಫರ್ಸ್‌ ಅಸೋಸಿಯೇಶನ್ ಎಕೆಪಿಎ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಞಂಗಾಡಿನಲ್ಲಿ ಗ್ರೂಪ್ ಫೋಕಸ್ ಕಾರ್ಯಕ್ರಮ ನಡೆಯಿತು.

ಡಿವೈಎಸ್‌ಪಿ ಬಾಬು ಪೆರಿಂಗೋತ್ತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಸಮುದಾಯ ಮಾದಕ ದ್ರವ್ಯಗಳ ಮೊರೆ ಹೋಗುತ್ತಿರುವುದು ಖೇದಕರ. ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಮಾದಕ ದ್ರವ್ಯಗಳ ವ್ಯಾಪಾರ ಇಂದು ಅತಿಯಾಗಿದೆ. ಈ ನಿಟ್ಟಿನಲ್ಲಿ ಪಾಲಕರು ಹಾಗೂ ಸಾರ್ವಜನಿಕರು ಜಾಗ್ರತೆ ವಹಿಸಬೇಕಾಗಿದೆ ಎಂದರು.

ಎಕೆಪಿಎ ಜಿಲ್ಲಾ ಅಧ್ಯಕ್ಷ ಸುಗುಣನ್ ಇರಿಯ ಅಧ್ಯಕ್ಷತೆ ವಹಿಸಿದ್ದರು. ಹೊಸದುರ್ಗ ಠಾಣಾಧಿಕಾರಿ ಪಿ.ಅಜಿತ್‌ಕುಮಾರ್ ಮಾದಕ ದ್ರವ್ಯ ವಿರುದ್ಧ ಸಂದೇಶ ನೀಡಿದರು. ಜನಮೈತ್ರಿ ಬೀಟ್ ಆಫೀಸರ್ ಪ್ರದೀಪ್ ಕೊತ್ತೋಳಿ, ಪ್ರೆಸ್ ಫೋರಂ ಕೋಶಾಧಿಕಾರಿ ಫಸಲ್ ರಹ್ಮಾನ್, ಎಕೆಪಿಎ ರಾಜ್ಯ ಉಪಾಧ್ಯಕ್ಷ ಸಜೀಶ್ ಮಣಿ, ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು, ರಾಜ್ಯ ವನಿತಾ ವಿಂಗ್ ಕೋ ಆರ್ಡಿನೇಟರ್ ಪ್ರಶಾಂತ್ ತೈಕಡಪ್ಪುರಂ, ಜಿಲ್ಲಾ ಉಪಾಧ್ಯಕ್ಷರಾದ ಅನೂಪ್ ಚಂದೇರ, ವಿ.ವಿ.ವೇಣು ಕುಂಬಳೆ, ಜಿಲ್ಲಾ ಜತೆ ಕಾರ್ಯದರ್ಶಿಗಳಾದ ಎನ್.ಕೆ.ಪ್ರಜಿತ್, ಕೆ.ಸುಧೀರ್, ರಾಜೀವ್, ಜಿಲ್ಲಾ ವೆಲ್ಫೇರ್ ಸಮಿತಿ ಅಧ್ಯಕ್ಷ ಶರೀಫ್, ಕಾಞಂಗಾಡು ವಲಯ ಅಧ್ಯಕ್ಷ ರಮೇಶ್ ಮಾವುಂಗಾಲ್, ಜಿಲ್ಲಾ ಕಾರ್ಯದರ್ಶಿ ವಿ.ಎನ್.ರಾಜೇಂದ್ರನ್ ಪಾಡಿ, ಜಿಲ್ಲಾ ಕೋಶಾಧಿಕಾರಿ ಸುನೀಲ್ ಕುಮಾರ್ ಪಿ.ಟಿ. ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net