

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಜಿಲ್ಲಾ ಅಭಿಯಾನ, ಪರಿಸರ ಸಮಿತಿ ಹಾಗೂ ಹಾಲಭಾವಿ ಸರ್ವದಾನ ಟ್ರಸ್ಟ್ ಸಹಯೋಗದಲ್ಲಿ ಸಮಿತಿ ವತಿಯಿಂದ ಸ್ವಚ್ಛತೆ ಹಾಗೂ ಕಸ ನಿರ್ವಹಣೆ ಕುರಿತು ಜಾಗೃತಿ ಮೂಡಿಸಲು ಮಹಿಳೆಯರಿಗೆ ಕಸ (ತ್ಯಾಜ್ಯ) ಮುಕ್ತ ಪರಿಸರ ವಿಷಯ ಕುರಿತು ಗುಂಪು ಚರ್ಚಾ ಸ್ಪರ್ಧೆಯನ್ನು ಜು. 27ರಂದು ಮಧ್ಯಾಹ್ನ 2.30ಕ್ಕೆ ಸಾಧನಕೇರಿ ಬೇಂದ್ರೆ ಭವನದಲ್ಲಿ ಆಯೋಗಿಸಲಾಗಿದೆ.
4 ಸದಸ್ಯರಿರುವ ಒಂದು ಗುಂಪಿಗೆ 5 ನಿಮಿಷ ಕಾಲಾವಕಾಶ ನೀಡಲಾಗುವುದು. ಹಸಿರು ಬಣ್ಣದ ಸಮವಸ್ತ್ರ ಧರಿಸಿರಬೇಕು. ಆಸಕ್ತರು ಹೆಸರು ನೋಂದಾಯಿಸಲು ಜು. 20 ಕೊನೇ ದಿನ. ಹೆಚ್ಚಿನ ಮಾಹಿತಿಗೆ ಪರಿಸರ ಸಮಿತಿ ಅಧ್ಯಕ್ಷೆ ಜಯಶ್ರೀ ಗೌಳಿಯವರ ಅವರನ್ನು ಸಂಪಕಿರ್ಸಬಹುದು ಎಂದು ಪ್ರಕಟಣೆ ತಿಳಿಸಿದೆ.