ಕುಡಿತದ ಅಮಲಿನಲ್ಲಿ ಗುಂಪು ಘರ್ಷಣೆ: ವ್ಯಕ್ತಿಯ ಬರ್ಬರ ಹತ್ಯೆ

crime page 1
Published on

ಕಲಬುರಗಿ: ಕುಡಿತದ ಅಮಲಿನಲ್ಲಿದ್ದ ಅಪರಿಚಿತರ ಗುಂಪು ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ನಗರದ ಸಿದ್ರಾಮೇಶ್ವರ ನಗರದಲ್ಲಿ ನಡೆದಿದೆ.

ಜಗನ್ನಾಥ್ ಸ್ವಾಧಿ (55) ಕೊಲೆಯಾದ ವ್ಯಕ್ತಿ. ಸಿದ್ರಾಮೇಶ್ವರ ನಗರದ ವೈನ್ ಶಾಪ್ ಬಳಿಯ ಖಾಲಿ ಜಾಗದಲ್ಲಿ ಶವ ಪತ್ತೆಯಾಗಿದೆ.

ಕುಡಿದ ಅಮಲಿನಲ್ಲಿ ಜಗಳ ನಡೆದು ನಂತರ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮಂಗಳವಾರ ರಾತ್ರಿ ವೈನ್​ಶಾಪ್​ ಬಳಿ ಗುಂಪು ಘರ್ಷಣೆ ನಡೆದಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಮದ್ಯದ ಅಂಗಡಿಯಲ್ಲಿ ಮದ್ಯ ಸೇವಿಸಿ ನಂತರ ಹೊರಗೆ ಬಂದು ಜಗಳ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಮದ್ಯದ ಅಂಗಡಿ ಹಾಗೂ ಸುತ್ತಲಿನ ಪ್ರದೇಶದಲ್ಲಿರುವ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಚೌಕ್ ಪೊಲೀಸರು ಕೇಸು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net