

ಚಿಕ್ಕಬಳ್ಳಾಪುರ: ಬರಪೀಡಿತ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಅವಧಿಯಲ್ಲೂ ಅಂತರ್ಜಲ ಮಟ್ಟ ಕುಸಿತ ಕಂಡು ಬಂದಿದ್ದು ಮುಂಬರುವ ದಿನಗಳಲ್ಲಿ ಉತ್ತಮ ಮಳೆ ಸುರಿದರೆ ಮತ್ತೆ ಏರಿಕೆ ಕಾಣುವ ನಿರೀಕ್ಷೆ ಹೊಂದಲಾಗಿದೆ.
ಕಳೆದ 2023 ರ ಜೂನ್‌ಗೆ ಹೋಲಿಸಿದ್ದಲ್ಲಿ ಈ ವರ್ಷ ಅಂತರ್ಜಲ ಮಟ್ಟ ಜೂನ್ ನಲ್ಲಿ ಇಳಿಕೆಯಾಗಿದೆ. ಇದೇ ವೇಳೆ ಹಿಂದೆ ಸರಾಸರಿ 21.95೨೧.೯೫ ಮೀಟರ್ ನೀರಿನ ಪ್ರಮಾಣ ಇದ್ದಿದ್ದು ಈಗ 42.17 ಮೀಟರ್‌ಗೆ ಇಳಿದಿದೆ. ಇದರೊಂದಿಗೆ 20.21 ಮೀಟರ್ ವ್ಯತ್ಯಾಸ ಕಂಡು ಬಂದಿದೆ ಎಂದು ಜಿಲ್ಲಾ ಅಂತರ್ಜಲ ಇಲಾಖೆಯು ಮಾಹಿತಿ ನೀಡಿದೆ.
ಬಯಲು ಸೀಮೆ ಜಿಲ್ಲೆಯು ಆಗಾಗ ಬರ ಪೀಡಿತ ಪ್ರದೇಶ ಎಂಬ ಹಣೆಪಟ್ಟಿಯನ್ನು ಹಾಕಿಕೊಂಡು ಸಾಗುತ್ತಿದೆ. ಕಳೆದ ಒಂದೂ ವರೆ ದಶಕದಲ್ಲಿ 10 ಕ್ಕೂ ಹೆಚ್ಚು ವರ್ಷ ಮಳೆಯ ಅಭಾವವನ್ನು ಕಂಡಿದೆ. ಕರೊನಾ ಸಂಕಷ್ಟ ಕಾಡಿದ 2020 ಮತ್ತು 2021 ರಲ್ಲಿ ಮಾತ್ರ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿದಿತ್ತು. ಜಲ ವೈಭವದಿಂದ ಗಮನ ಸೆಳೆದಿತ್ತು. ಈ ಭಾಗದ ವಾರ್ಷಿಕ ವಾಡಿಕೆ ಮಳೆ 735 ಮಿ.ಮೀ. ಆದರೆ, 2023-2024 ನೇ ಸಾಲಿನಲ್ಲಿ 586.1ಮಿ.ಮೀ ಮಳೆ ಸುರಿದು, ಶೇ.20 ರಷ್ಟು ಕೊರತೆಯಾಗಿತ್ತು. ಮಳೆಯ ಅಭಾವ ಮತ್ತು ಬೆಳೆ ನಷ್ಟದಿಂದ ಸರ್ಕಾರವು ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂಬುದಾಗಿ ಘೋಷಿಸಿದ್ದು ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯ ನಿರೀಕ್ಷೆ ಹೊಂದಲಾಗಿದೆ. ಅದರಂತೆ ಮುಂಗಾರು ಪೂರ್ವ ಮತ್ತು ಮುಂಗಾರು ಅವಧಿಯ ಪ್ರಾರಂಭದಲ್ಲಿ ವಾಡಿಕೆ ಮಳೆಗಿಂತಲೂ ಉತ್ತಮ ಮಳೆ ಬಿದ್ದಿದ್ದು ಜೂನ್, ಇನ್ನೂ ಜುಲೈನಲ್ಲಿನ ಎರಡು ವಾರ ಕೊರತೆಯಾಗಿದೆ.
*ದಶಕದಲ್ಲಿ ಸ್ಥಿರ ಅಂತರ್ಜಲ ಮಟ್ಟ
ಕಳೆದ 2014 ರಿಂದ 2024 ರ ಮೇ ವರೆಗೆ ಸರಾಸರಿ ಸ್ಥಿರ ಅಂತರ್ಜಲ ಮಟ್ಟ 35.29 ರಿಂದ 40.07 ಮೀಟರ್ ರವರೆಗೆ ಕಂಡು ಬಂದಿದೆ. 2022 ರಲ್ಲಿ ಅಂತರ್ಜಲ ಮಟ್ಟ 17.78 ಮೀಟರ್ ಗೆ ಬಂದು ಜಲ ಹಾಹಾಕಾರವನ್ನು ನೀಗಿಸಲು ಸಹಕಾರಿಯಾಗಿತ್ತು.
*ಹಲವೆಡೆ ಸಮಸ್ಯೆ
ಬಾಗೇಪಲ್ಲಿ ಮತ್ತು ಗುಡಿಬಂಡೆ ಭಾಗದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು ಇಲ್ಲಿನ ಕೊಳವೆ ಬಾವಿಗಳಲ್ಲಿ ಲಭ್ಯ ನೀರಿನಲ್ಲಿ ಫ್ಲೋರೈಡ್, ನೈಟ್ರೇಟ್ ಸೇರಿದಂತೆ ಮಾರಕ ಲವಣಾಂಶಗಳು ಕಂಡು ಬರುತ್ತಿದ್ದು ಫ್ಲೋರೋಸೀಸ್ ಜತೆಗೆ ನಾನಾ ಅನಾರೋಗ್ಯ ಸಮಸ್ಯೆಗಳನ್ನು ಕಾಣುವಂತಾಗಿದೆ. ಚಿಕ್ಕಬಳ್ಳಾಪುರಕ್ಕೆ ಜಕ್ಕಲಮಡಗು ಜಲಾಶಯ, ಮಂಚೇನಹಳ್ಳಿಗೆ ದಂಡಿಗಾನಹಳ್ಳಿ ಕೆರೆ, ಚಿಂತಾಮಣಿಗೆ ಕನ್ನಂಪಲ್ಲಿ ಕೆರೆ, ಗುಡಿಬಂಡೆಗೆ ಅಮಾನಿ ಭೈರಸಾಗರ ಕೆರೆಯ ನೀರನ್ನು ಕುಡಿಯುವ ನೀರಿಗೆ ಬಳಸಲಾಗುತ್ತಿದೆ. ಇದರ ನಡುವೆಯೂ ಕೊಳವೆ ಬಾವಿಯ ಆಶ್ರಯ ಮಾತ್ರ ತಪ್ಪಿಲ್ಲ.
*ಕೊಳವೆ ಬಾವಿ ಆಸರೆ ಹೆಚ್ಚಳ
ಈ ಭಾಗವು ಮೊದಲಿನಿಂದಲೂ ವಿವಿಧ ಜಲಮೂಲಗಳ ನಡುವೆ ಕೊಳವೆ ಬಾವಿ ಆಸರೆಯನ್ನೇ ಹೆಚ್ಚಿಗೆ ನೆಚ್ಚಿಕೊಂಡಿದೆ. ಕೃಷಿ ಚಟುವಟಿಕೆಗೆ ನಿರಂತರವಾಗಿ ಜಮೀನುಗಳಲ್ಲಿ ಸಾವಿರಾರು ಅಡಿ ಆಳಕ್ಕೆ ಕೊಳವೆ ಬಾವಿ ಕೊರೆಸಲಾಗುತ್ತಿದೆ. ಬಹಳಷ್ಟು ಕಡೆ ವಿಲ ಯತ್ನ ನಡೆಸಿ, ಕೈ ಸುಟ್ಟುಕೊಂಡು ಪ್ರಕರಣಗಳು ಇವೆ. ಸಮೃದ್ಧ ನೀರು ಲಭ್ಯ ಇರುವ ಜಮೀನುಗಳಲ್ಲಿ ಒಳ್ಳೆಯ ಇಳುವರಿ ಕಾಣಲಾಗುತ್ತದೆ. ಇನ್ನು ಜಿಲ್ಲೆಯಲ್ಲಿ 637 ಕುಡಿಯುವ ನೀರಿನ ಶುದ್ದೀಕರಣ ಟಕಗಳನ್ನು ಅಳವಡಿಸಿದ್ದು ಇವುಗಳಿಗೆ ನೀರಿನ ಮೂಲ ಕೊಳವೆ ಬಾವಿ. ಇದರ ಜತೆಗೆ ಸ್ಥಳಿಯ ಆಡಳಿತ ಸಂಸ್ಥೆಗಳು ವಿವಿಧ ವಾರ್ಡುಗಳು, ಬಡಾವಣೆಗಳಿಗೆ ಕೊಳವೆ ಬಾವಿ ಕೊರೆಸಿ, ನೀರನ್ನು ಪೂರೈಸುತ್ತಿವೆ.