ಭಗವತಿ ಕೆರೆ ಭರ್ತಿಯಿಂದ ಅಂತರ್ಜಲ ವೃದ್ಧಿ

Bhagavti Lake
Published on

ರಟ್ಟಿಹಳ್ಳಿ: ತಾಲೂಕಿನ ಜೋಕನಾಳ ಗ್ರಾಮದ ಬಳಿ ಐತಿಹಾಸಿಕ ಪ್ರಸಿದ್ಧ ಭಗವತಿ ಕೆರೆಗೆ ಮಾಜಿ ಸಚಿವ ಬಿ.ಸಿ. ಪಾಟೀಲ, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಸೋಮವಾರ ಬಾಗಿನ ಅರ್ಪಿಸಿದರು.

ಭಗವತಿ ದೇವಿ ನೆಲೆಸಿರುವ ಈ ಪುಣ್ಯಕ್ಷೇತ್ರದಲ್ಲಿ ನೈಸರ್ಗಿಕವಾಗಿ ಬೇಸಿಗೆಯಲ್ಲಿಯೂ ಗುಡ್ಡಗಾಡುಗಳಿಂದ ನಿರಂತರವಾಗಿ ನೀರು ಹರಿಯುತ್ತದೆ. ಈ ನೀರನ್ನು ಸಂಗ್ರಹಿಸಿ ಅಣೆಕಟ್ಟು ನಿರ್ಮಾಣ ಮಾಡಬೇಕು. ಕೆರೆ ಭರ್ತಿ ಮಾಡಬೇಕು ಎಂಬುದು ಈ ಭಾಗದ ಗ್ರಾಮಸ್ಥರ ಬೇಡಿಕೆಯಾಗಿತ್ತು. ಈ ನಿಟ್ಟಿನಲ್ಲಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ಭಗವತಿ ಮತ್ತು ಸುತ್ತಮುತ್ತಲಿನ ಕೆರೆಗಳ ಅಭಿವೃದ್ಧಿ ಮತ್ತು ಬುಳ್ಳಾಪುರ-ಹಾಡೆ ಏತ ನೀರಾವರಿ ಯೋಜನೆಯಿಂದ ತುಂಗಭದ್ರಾ ನದಿ ಜಾಕ್​ವೆಲ್ ಮೂಲಕ ಹಾಡೆ, ಬುಳ್ಳಾಪುರ, ಭಗವತಿ, ಪರ್ವತಸಿದ್ದಗೇರಿ, ಎಲಿವಾಳ, ರಾಮತೀರ್ಥ, ಚಪ್ಪರದಹಳ್ಳಿ ಒಟ್ಟು 7 ಕೆರೆಗಳನ್ನು ತುಂಬಿಸುವ 20 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಡಿಸೆಂಬರ್ ವೇಳೆಗೆ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಈ ಕೆರೆಗಳ ಭರ್ತಿಯಿಂದ ಅಂತರ್ಜಲ ವೃದ್ಧಿಯಾಗಿ ರೈತರಿಗೆ ನೆರವಾಗುತ್ತದೆ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ದೇವರಾಜ ನಾಗಣ್ಣನವರ, ರವಿಶಂಕರ ಬಾಳೇಕಾಯಿ, ಸುಶೀಲ ನಾಡಗೇರ, ಆನಂದಪ್ಪ ಹಾದಿಮನಿ, ಫಕೀರಪ್ಪ ತಮ್ಮಣ್ಣನವರ, ಕರಬಸಪ್ಪ ಸೂರ್ಯವಂಶಿ, ಸುಭಾಸ ಕರಿಗಾರ, ಹನುಮಂತಪ್ಪ ತಳವಾರ, ಮಾಲತೇಶಗೌಡ ಗಂಗೋಳ, ರಾಜು ಬಟ್ಲಕಟ್ಟಿ, ಗ್ರಾಪಂ ಅಧ್ಯಕ್ಷ ಫಕೀರೇಶ ತುಮ್ಮಿನಕಟ್ಟಿ, ಮಹೇಶ್ವರಗೌಡ ಚಿಗ್ಗೌಡ್ರ, ರಾಮನಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ರೇವಣೆಪ್ಪ ಎರೇಹಳ್ಳಿ, ಜಗದೀಶಗೌಡ ಲಕ್ಕನಗೌಡ್ರ, ನಾಗನಗೌಡ ಪಾಟೀಲ, ವಸಂತಗೌಡ ಪಾಟೀಲ, ರಾಘವೇಂದ್ರ ಹರವಿಶೆಟ್ಟರ್, ಪಕ್ಷದ ಕಾರ್ಯಕರ್ತರು, ವಿವಿಧ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net