ಅಡಕೆ ಬೆಳೆಗಾರರು ಆತಂಕ ಪಡಬೇಕಿಲ್ಲ: ಮಹೇಶ್ ಹುಲ್ಕುಳಿ ಭರವಸೆ

15 smg mahesh hulkuli
Published on

ಸೊರಬ: ಮಲೆನಾಡು ಭಾಗದಲ್ಲಿ ಅಡಕೆ ಪ್ರಮುಖ ವಾಣಿಜ್ಯ ಬೆಳೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಖೆಯನ್ನು ಬಲಪಡಿಸಲು ಬೆಳೆಗಾರರು ಮತ್ತು ಷೇರುದಾರರ ಸಹಕಾರ ಅಗತ್ಯ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ ಹೇಳಿದರು.

ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ಮ್ಯಾಮ್ಕೋಸ್ ಷೇರುದಾರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಅಡಕೆ ಬೆಳೆಗಾರರ ಬೇಡಿಕೆಗಳ ಕುರಿತು ಸಮಗ್ರವಾಗಿ ಮತ್ತು ಮುಕ್ತವಾಗಿ ಚರ್ಚಿಸಲು ಸಭೆ ಆಯೋಜಿಸಲಾಗಿದೆ ಎಂದರು.
ಅಡಕೆ ಬೆಳೆಗಾರರ ಹಿತಾಸಕ್ತಿ ರಕ್ಷಣೆಗಾಗಿ ಕೇಂದ್ರ ವಾಣಿಜ್ಯ ಸಚಿವಾಲಯ ಪ್ರೋತ್ಸಾಹ ನೀಡುತ್ತಿದೆ. ಆತಂಕದಲ್ಲಿರುವ ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಕೇಂದ್ರ ಮಾಡುತ್ತಿದೆ. ಸಹಕಾರ ಸಂಘವು ಅಡಕೆ ಬೆಳೆಗಾರರು ಮತ್ತು ಕೂಲಿ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುತ್ತಿದೆ. ಜಿಲ್ಲೆಯಲ್ಲಿ ಅಡಕೆ ಬೆಳೆಯುವ ಪ್ರದೇಶಗಳಲ್ಲಿ ಸಂಘವು ಸಕ್ರಿಯವಾಗಿದ್ದು, ಲಾಭದತ್ತ ಸಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಡಕೆ ಹಾನಿಕಾರಕ ಎಂದು ಜನತೆ ಭಾವಿಸಿದ್ದರು. ಆದರೆ ಬೆಂಗಳೂರಿನ ಸಂಸ್ಥೆಯೊAದು ಸಂಶೋಧನೆ ನಡೆಸಿ, ಅಡಕೆ ಹಾನಿಕಾರಕವಲ್ಲ ಎಂಬ ವರದಿ ನೀಡಿದೆ. ಈ ವರದಿಯನ್ನು ಸುಪ್ರೀಂ ಕೋರ್ಟ್ನಲ್ಲಿಯೂ ಮಂಡಿಸಲಾಗಿದೆ. ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ. ಶೀಘ್ರದಲ್ಲಿಯೇ ಆಶಾದಾಯಕ -Àಲಿತಾಂಶ ಲಭ್ಯವಾಗಲಿದೆ ಎಂದರು.
ತಾಲೂಕಿನಲ್ಲಿ ಅಡಕೆ ಬೆಳೆಗಾರರ ಸಂಖ್ಯೆ ಹೆಚ್ಚುತ್ತಿದೆ. ಹಸಿ ಅಡಕೆ ಖರೀದಿಯೂ ಇಲ್ಲಿನ ಶಾಖೆಯಲ್ಲಿ ನಡೆಯಬೇಕು. ಹೆಚ್ಚಿನ ದರಕ್ಕೆ ಅಡಕೆ ಕೊಳ್ಳುತ್ತಾರೆ ಎನ್ನುವ ಭರವಸೆಯನ್ನು ಬೆಳೆಗಾರರಲ್ಲಿ ಮೂಡಿಸಬೇಕು. ಈ ನಡುವೆ ಕೇವಲ ಸಂಘದ ಸದಸ್ಯರು ಮಾತ್ರವಲ್ಲದೆ ಸಾಮಾನ್ಯ ಜನರೊಂದಿಗೆ ಸಭೆಗಳು ನಡೆಯಬೇಕು ಎಂದು ಸಲಹೆ ನೀಡಿದರು.
ಮ್ಯಾಮ್ಕೋಸ್ ನಿರ್ದೇಶಕರಾದ ಕೀರ್ತಿರಾಜ ಕಾನಳ್ಳಿ, ಸುಬ್ರಹ್ಮಣ್ಯ ಯಡಗೆರೆ, ದೇವಾನಂದ, ಸಿ.ಬಿ.ಈಶ್ವರಪ್ಪ, ಎಚ್.ಟಿ.ಸುಬ್ರಹ್ಮಣ್ಯ, ಬಿ.ಸಿ.ನರೇಂದ್ರ, ವಿರೂಪಾಕ್ಷಪ್ಪ, ಟಿ.ಆರ್.ಭೀಮರಾವ್, ತಿಮ್ಮಪ್ಪ, ವಿಜಯಲಕ್ಷಿ÷್ಮÃ, ಶ್ರೀಕಾಂತ, ಪ್ರಮುಖರಾದ ಎಚ್.ಎಸ್.ಮಂಜಪ್ಪ, ಅಶೋಕ್‌ನಾಯ್ಕ್, ಸೀತಾರಾಮ ಭಟ್, ಚಂದ್ರಣ್ಣ, ಎಪಿಎಂಸಿ ಕಾರ್ಯದರ್ಶಿ ಎಚ್.ಆಶಾ ಇತರರಿದ್ದರು.

19ಕ್ಕೆ ಷೇರುದಾರರ ಸಮಾಲೋಚನ ಸಭೆ
ಭದ್ರಾವತಿ: ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ ನಿ. ಭದ್ರಾವತಿ ಶಾಖೆಯ ಷೇರುದಾರರ ಸಮಾಲೋಚನ ಸಭೆಯು ಆ.19ರಂದು ಬೆಳಗ್ಗೆ 11ಗಂಟೆಗೆ ನಗರದ ಚನ್ನಗಿರಿ ರಸ್ತೆ ಎಪಿಎಂಸಿ ಆವರಣದಲ್ಲಿರುವ ಸಂಘದ ಶಾಖೆಯಲ್ಲಿ ನಡೆಯಲಿದೆ. ಸಂಘದ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಪಾಲ್ಗೊಳ್ಳುವರು. ಸಭೆಗೆ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಖಾ ವ್ಯವಸ್ಥಾಪಕ ಸಿ.ಆರ್.ಪರಶುರಾಮ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net