

ಹುಬ್ಬಳ್ಳಿ : ಸಚಿವ ಶಿವರಾಜ ತಂಗಡಗಿ ಅವರಿಗೆ ಮನವಿ ಮಾಡಿದ ಪರಿಣಾಮವಾಗಿ ಉತ್ತರ ಕರ್ನಾಟಕದಿಂದ ಬರುವ ಮ್ಯಾಟ್ರಿಕ್ ಪೂರ್ವ ಒಬಿಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಲ್ಲಿನ ಬೈರಿದೇವರಕೊಪ್ಪದ ಸಂಗೊಳ್ಳಿ ರಾಯಣ್ಣ ನಗರದಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಸಂಗೊಳ್ಳಿ ರಾಯಣ್ಣ ನಗರದಲ್ಲಿ ಒಬಿಸಿ ಹಾಸ್ಟೆಲ್ ನಿಮಾಣಕ್ಕೆ ಭೂಮಿಪೂಜೆ ನೆರವೇರಿಸಿ, ಅವರು ಮಾತನಾಡಿದರು.
ಅಂದಾಜು 3.90 ಲಕ್ಷ ರೂ. ವೆಚ್ಚದಲ್ಲಿ ನಿರ್ವಣಗೊಳ್ಳಲಿರುವ ಹಾಸ್ಟೆಲ್ ಕಟ್ಟಡ, ಜಿ ಪ್ಲಸ್ 1 ಕಟ್ಟಡದ ಒಟ್ಟು 16 ಕೊಠಡಿಗಳನ್ನು ಹೊಂದಲಿದೆ. ಸುಮಾರು 102 ಅರ್ಹ ವಿದ್ಯಾರ್ಥಿಗಳು ಇಲ್ಲಿ ವಸತಿ ಮಾಡಬಹುದು. ಒಟ್ಟು 1,500 ಚದುರ ಅಡಿ ವಿಸ್ತೀರ್ಣವಿದು, ಪ್ರತಿ ಕೊಠಡಿಯಯಲ್ಲಿ 12 ವಿದ್ಯಾರ್ಥಿಗಳು ಇರಬಹುದಾಗಿದೆ ಎಂದರು.
ಅತ್ಯಾಧುನಿಕ ಸೌಲಭ್ಯಗಳುಳ್ಳ ಈ ಹಾಸ್ಟೆಲ್ನಲ್ಲಿ ಅಡುಗೆ ಮನೆ, ಡೈನಿಂಗ್ ರೂಮ್ ಸಿಬ್ಬಂದಿ ಕೊಠಡಿ ಸೇರಿದಂತೆ ಇನ್ನಿತರ ಸೌಕರ್ಯಗಳು ಇರಲಿವೆ ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಕೃಷ್ಣ ಶೆಟ್ಟಿ, ಮುತ್ತು ಹೆಬ್ಬಳ್ಳಿ, ಯು.ಆರ್. ಪಿರಣ್ಣವರ, ವೆಂಕಟೇಶ ಪಾಟೀಲ, ಗೃಹ ನಿಮಾಣ ಸಂಘದ ಅಧಿಕಾರಿಗಳು ಉಪಸ್ಥಿತರಿದ್ದರು.