ನೆಲಬಾಡಿಗೆ ವಸೂಲಿ ಹಕ್ಕು 10.50 ಲಕ್ಷ ರೂ.ಗೆ ಹರಾಜು

12KDR1 (1)
ಕಡೂರು ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ನೆಲಬಾಡಿಗೆ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಯಿತು. ಕೆ.ಎಸ್.ಮಂಜುನಾಥ್, ತೋಟದಮನೆ ಮೋಹನ್ ಕುಮಾರ್, ಮನು, ಯಾಸೀನ್, ಶ್ರೀಕಾಂತ್ ಮತ್ತಿತರಿದ್ದರು.
Published on

ಕಡೂರು: ಪಟ್ಟಣದ ಪುರಸಭೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳ ನೆಲ ಬಾಡಿಗೆಯ 2024-25ನೇ ಸಾಲಿನ ವಾರ್ಷಿಕ ಬಹಿರಂಗ ಹರಾಜಿನಲ್ಲಿ 10.50 ಲಕ್ಷ ರೂ.ಗಳ ಅಂತಿಮ ಬಿಡ್ ಮೊತ್ತ ಅಂಗೀಕರಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ನಡೆದ ನೆಲಬಾಡಿಗೆಯ ಬಹಿರಂಗ ಹರಾಜು ಪ್ರಕ್ರಿಯೆ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿ ಮಾತನಾಡಿ, ಬಹಿರಂಗ ಹರಾಜಿನಲ್ಲಿ 7 ಜನರು ಭಾಗವಹಿಸಿದ್ದರು. ಅಂತಿಮವಾಗಿ ಕೆ.ಜಿ.ಮಂಜುನಾಥ್ ಎಂಬುವವರು 10.50 ಲಕ್ಷ ರೂ. ಮೊತ್ತಕ್ಕೆ ಬೀಡ್ ಕೂಗುವ ಮೂಲಕ ಬಾಡಿಗೆ ವಸೂಲಿ ಹಕ್ಕನ್ನು ಪಡೆದುಕೊಂಡಿದ್ದಾರೆ. ಕಳೆದ ಸಾಲಿನಲ್ಲಿ 9.9 ಲಕ್ಷ ರೂ.ಗಳಿಗೆ ಹರಾಜು ನಡೆಸಲಾಗಿತ್ತು. ಈ ಸಾಲಿನಲ್ಲಿ 80 ಸಾವಿರ ರೂ.ಗಳು ಹೆಚ್ಚಿನ ಲಾಭ ಪುರಸಭೆಗೆ ಲಭಿಸಿದೆ. ಪಾರದರ್ಶಕವಾಗಿ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಹರಾಜುದಾರರು ಕೂಗಿದ 10.50 ಲಕ್ಷ ರೂ.ಗಳ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆಗೊಳಿಸಲಾಗಿದೆ ಎಂದರು.
ಪುರಸಭೆ ಸದಸ್ಯರಾದ ತೋಟದಮನೆ ಮೋಹನ್‌ಕುಮಾರ್, ಮರುಗುದ್ದಿಮನು, ಸೈಯಾದ್ ಯಾಸೀನ್, ಶ್ರೀಕಾಂತ್, ಪುರಸಭೆ ಸಿಬ್ಬಂದಿಗಳಾದ ತಿಮ್ಮಯ್ಯ, ಜಯಣ್ಣ, ಗಿರೀಶ್, ಚಂದ್ರು, ವಾಸು, ಶ್ರೀಹರ್ಷ ಮುಖಂಡರಾದ ರಾಜು, ಚಿನ್ನರಾಜು ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net