ಕಡಲೆ ಖರೀದಿ ಪ್ರಮಾಣ ಹೆಚ್ಚಿಸಿ

17-gdg-3
Published on

ಗದಗ: ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಪ್ರಮಾಣವನ್ನು ಸರ್ಕಾರ 10 ಕ್ವಿಂಟಾಲ್​ನಿಂದ 25 ಕ್ವಿಂಟಾಲ್​ಗೆ ಹೆಚ್ಚಿಸಬೇಕು ಎಂದು ಕೃಷಿಕ ಸಮಾಜ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಸಜ್ಜನರ ಮಾತನಾಡಿ, ಬೆಂಬಲ ಬೆಲೆ ಯೋಜನೆಯಡಿ 10 ಕ್ವಿಂಟಾಲ್​ವರೆಗೆ ಕಡಲೆ ಖರೀದಿಸಲು ಸರ್ಕಾರ ಆದೇಶಿಸಿರುವುದು ಸ್ವಾಗತಾರ್ಹ. ಆದರೆ, ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಪ್ರತಿ ಎಕರೆಗೆ 4ರಿಂದ 6 ಕ್ವಿಂಟಾಲ್​ವರೆಗೆ ಇಳುವರಿ ಬಂದಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಕಡಲೆಗೆ 4000 ರೂ. ಕ್ಕಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತದೆ. ಆದ್ದರಿಂದ ರೈತರ ಬಳಿ ಉತ್ಪನ್ನ ಜಾಸ್ತಿ ಇದೆ. ಹೀಗಾಗಿ ಖರೀದಿ ಪ್ರಮಾಣವನ್ನು ಹೆಚ್ಚಿಸಬೇಕು. ಸತತ 4 ವರ್ಷಗಳ ಬರಗಾಲದಿಂದ ತತ್ತರಿಸಿದ ರೈತರಿಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.

ಬಸನಗೌಡ ಕರಬಸನಗೌಡ್ರ, ರವಿ ದಾನರೆಡ್ಡಿ, ರಮೇಶ ಕೋಳಿವಾಡ, ಚಂದ್ರಪ್ಪ ಹೊಸಮನಿ, ಶರಣಪ್ಪ ಭಾವಿ, ಮುತ್ತಪ್ಪ ಕಿತ್ತಲಿ, ಶಿವಪ್ಪ ಹಿರೇಹೊಳಿ, ಬಸನಗೌಡ ಪಾಟೀಲ, ರವಿ ಗದ್ದಿಗೌಡ್ರ, ನೀಲಪ್ಪಗೌಡ ದ್ಯಾಪನಗೌಡ್ರ, ರಾಯಪ್ಪ ಬದಾಮಿ, ಮಹಾಂತೇಶ ಕೊಪ್ಪದ, ಬಸಪ್ಪ ಹೂಗಾರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net