ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆ: ಮಳೆಯಿಂದಾಗಿ ಮಂದಗತಿ

20bdvt4 ....
ಭದ್ರಾವತಿಯ ಕರ್ನಾಟಕ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಕೆಗೆ ಕಾಯುತ್ತಿರುವ ಮಹಿಳೆಯರು.
Published on

ಭದ್ರಾವತಿ: ನಗರಸಭೆ ವಾರ್ಡ್ ವ್ಯಾಪ್ತಿ ಸೇರಿದಂತೆ ತಾಲೂಕಿನಾದ್ಯಂತ ತೆರೆಯಲಾಗಿರುವ ಗೃಹಲಕ್ಷ್ಮೀ ಅರ್ಜಿ ಸ್ವೀಕೃತಿ ಕೇಂದ್ರಗಳಲ್ಲಿ ಮೊದಲ ದಿನವಾದ ಗುರುವಾರ ಬೆಳಗ್ಗಿನಿಂದಲೇ ಅರ್ಜಿ ಸ್ವೀಕಾರ ಆರಂಭಗೊಂಡಿತು. ಆದರೆ ಮಳೆಯ ಕಾರಣ ಬಹುತೇಕ ಮಹಿಳೆಯರು ಸ್ವೀಕೃತಿ ಕೇಂದ್ರದತ್ತ ಸುಳಿಯಲಿಲ್ಲ.

ಇನ್ನೂ ಸಮಯವಿದೆ. ಮಳೆಯಲ್ಲಿ ಸಾಲುಗಟ್ಟಿ ನಿಲ್ಲುವ ಪ್ರಮೇಯವೇ ಬೇಡವೆಂದು ಸುಮ್ಮನಾದರು. ಬೆರಳೆಣಿಕೆಯಷ್ಟು ಮಹಿಳೆಯರು ಅರ್ಜಿ ಸಲ್ಲಿಸಿದರು. ಹೊಸಸಿದ್ದಾಪುರ ಸ್ವಿಕೃತಿ ಕೇಂದ್ರ ಸೇರಿದಂತೆ ಹಲವು ಕೇಂದ್ರಗಳಲ್ಲಿ ಸ್‌ಟಾವೇರ್ ಸಮಸ್ಯೆ ಎದುರಾಯಿತು. ಕೂಡಲೆ ಸಮಸ್ಯೆ ಸರಿಪಡಿಸಿ ಅವಕಾಶ ಮಾಡಿಕೊಡಲಾಯಿತು. ಮೊಬೈಗಳಿಗೆ ಮೆಸೇಜ್ ಬಂದ ಗೃಹಿಣಿಯರು ಮಾತ್ರ ಸ್ವೀಕೃತಿ ಕೇಂದ್ರಗಳಿಗೆ ತೆರಳಬೇಕಾಗಿದ್ದು ಈ ಪ್ರಕ್ರಿಯೆ ಕೆಲವರಲ್ಲಿ ಗೊಂದಲ ಮೂಡಿಸಿತ್ತು. ನಗರ ಹಾಗೂ ಗ್ರಾಮೀಣ ಭಾಗದ ಕೆಲವು ಸ್ವೀಕೃತಿ ಕೇಂದ್ರಗಳಲ್ಲಿ ಸಾರ್ವಜನಿಕರು ಆಗಮಿಸಿ ಅರ್ಜಿ ಸಲ್ಲಿಸಲು ಮುಂದಾದರು. ಅಲ್ಲಿದ್ದ ನೋಡಲ್ ಅಧಿಕಾರಿಗಳು ತಿಳಿವಳಿಕೆ ಮೂಡಿಸಿ ಮೊಬೈಲ್‌ಗಳಲ್ಲಿ ಮೆಸೇಜ್ ಗಮನಿಸಿ ನಿಗದಿಪಡಿಸಿರುವ ದಿನದಂದು ಬರುವಂತೆ ತಿಳಿಸಿದರು. ದಿನಕ್ಕೆ ಒಂದು ಕೇಂದ್ರದಿಂದ 60 ಅರ್ಜಿ ಸ್ವೀಕರಿಸಲು ಮಾತ್ರ ಅವಕಾಶವಿದ್ದು ಅದರಂತೆ ಅರ್ಜಿ ಸ್ವೀಕರಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net