ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಸರ್ವರ್ ಸಮಸ್ಯೆ; ಕೋಗುಂಡೆಯಲ್ಲಿ ಆಕ್ರೋಶ

BRM GRUHALAKSHMI 21 (3)
Published on

ಭರಮಸಾಗರ: ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಸರ್ವರ್ ಸಮಸ್ಯೆಯುಂಟಾದ ಕಾರಣ ಹೋಬಳಿಯ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರದ ಬಳಿ ಮಹಿಳೆಯರು ಗುಂಪು ಗುಂಪಾಗಿ ದಿನವಿಡೀ ಕಾದು ಕುಳಿತಿದ್ದರು.

ಇಲ್ಲಿನ ಗ್ರಾಪಂ ಬಾಪೂಜಿ ಸೇವಾ ಕೇಂದ್ರದಲ್ಲಿ ಗುರುವಾರ ಕೇವಲ ಒಂದು, ಶುಕ್ರವಾರ ಕೇವಲ 2, ಆಸ್ಪತ್ರೆ ರಸ್ತೆಯ ಗ್ರಾಮ ಒನ್‌ನಲ್ಲಿ ಇಲ್ಲಿಯವರೆಗೆ 3 ಅರ್ಜಿ ಮಾತ್ರ ನೋಂದಣಿ ಮಾಡಲಾಗಿದೆ.

ಕೋಗುಂಡೆ ಗ್ರಾಮದಲ್ಲಿ ಎರಡು ಗ್ರಾಮ ಒನ್ ಕೇಂದ್ರಗಳಿದ್ದು, ಎರಡೂ ಕೇಂದ್ರಗಳಲ್ಲಿಯೂ ಸರ್ವರ್ ಸಮಸ್ಯೆ ಕಾಡುತ್ತಿದೆ. ಗುರುವಾರ 9, ಶುಕ್ರವಾರ ಸಂಜೆ ವೇಳೆಗೆ 4 ಅರ್ಜಿ ಸಲ್ಲಿಕೆಯಾಗಿವೆ ಎಂದು ನಿರ್ವಾಹಕರು ತಿಳಿಸಿದ್ದಾರೆ.

ಇಲ್ಲಿನ ಗ್ರಾಪಂನಲ್ಲಿ ತೆರೆಯಲಾಗಿರುವ ಗ್ರಾಮ ಒನ್ ಕಳೆದ ಜನೇವರಿಯಿಂದಲೂ ಕೆಲಸ ನಿರ್ವಹಿಸದೆ ಜನರಿಗೆ ಸಮಸ್ಯೆಯುಂಟಾಗಿತ್ತು. ಇದರಿಂದ ನೆರೆದಿದ್ದ ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮಜುಂದಾದ ಘಟನೆ ನಡೆಯಿತು.

ತಕ್ಷಣ ಎಚ್ಚೆತ್ತ ಗ್ರಾಪಂ ಅಧಿಕಾರಿಗಳು, ಗ್ರಾಮ ಒನ್ ನಿರ್ವಾಹಕರನ್ನು ಕರೆಸಿ ಹೊಸ ಕಂಪ್ಯೂಟರ್ ಅಳವಡಿಸುವ ಮೂಲಕ ಸಮಸ್ಯೆ ಪರಿಹರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net