ಗೃಹಲಕ್ಷ್ಮಿ ಹಣದಿಂದ ದೇವಸ್ಥಾನಕ್ಕೆ ದೇಣಿಗೆ

TEMPLE
ಕೂಡ್ಲಿಗಿ ಪಪಂ ವ್ಯಾಪ್ತಿಯ ಅಮರದೇವರ ಗುಡ್ಡದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣದಿಂದ ಗ್ರಾಮದ ದೇವಸ್ಥಾನಕ್ಕೆ ಅಡುಗೆ ಪಾತ್ರೆ ಸಾಮಗ್ರಿಗಳನ್ನು ದೇಣಿಗೆ ನೀಡಿದರು. ಪ್ರಮುಖರಾದ ಶಾರದಮ್ಮ,ಶಾಂಭವಿ,ವೀರಮ್ಮ,ಕೊಟ್ರಮ್ಮ ಇದ್ದರು.
Published on

ಕೂಡಿಟ್ಟು, 18ನೇ ವಾರ್ಡ್ ಅಮರದೇವರಗುಡ್ಡ ಮಹಿಳೆಯರು ಗ್ರಾಮದ ಆರಾಧ್ಯ ದೈವ ಅಮರೇಶ್ವರ ಹಾಗೂ ಬಸವೇಶ್ವರಗೆ ಕಾಣಿಕೆ ರೂಪದಲ್ಲಿ ಪಾತ್ರೆ ಸೇರಿ ಅಡುಗೆ ಸಾಮಗ್ರಿಗಳನ್ನು ದೇವಸ್ಥಾನಕ್ಕೆ ಮಂಗಳವಾರ ಅರ್ಪಿಸುವ ಮೂಲಕ ಭಕ್ತಿ ಮೆರೆದಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ ತಲಾ 2 ಸಾವಿರ ರೂ. ಜಮಾ ಆಗುತ್ತಿರುವುದು ಖುಷಿಯ ವಿಚಾರ. ಸರ್ಕಾರದಿಂದ ನಮ್ಮ ಖಾತೆಗೆ ಬರುವ ಹಣದಿಂದ ಏನಾದ್ರೂ ಸಹಾಯ ಮಾಡಲು ತೀರ್ಮಾನಿಸಿ ಕಾಣಿಕೆ ರೂಪದಲ್ಲಿ ಪಾತ್ರೆಗಳನ್ನು ಕೊಡುಗೆಯಾಗಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net