ಗೃಹಲಕ್ಷ್ಮಿ ನೋಂದಣಿಗೆ ಮುಗಿಬಿದ್ದ ಮಹಿಳೆಯರು

22 MUL 1
ಮುಳಗುಂದ ಪಟ್ಟಣದ ಕರ್ನಾಟಕ್ ಒನ್ ಕೇಂದ್ರದಲ್ಲಿ ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಮಹಿಳೆಯರ ನೂಕುನುಗ್ಗಲು.
Published on

ಮುಳಗುಂದ: ಗೃಹಲಕ್ಷ್ಮಿ ಯೋಜನೆಯ ನೋಂದಣಿಯ ಎರಡನೇ ದಿನವಾದ ಶುಕ್ರವಾರವೂ ಮಹಿಳೆಯರು ಪರದಾಡಿದರು. ಮಳೆ ಪ್ರಾರಂಭವಾಗಿದ್ದು, ಮಳೆಯಲ್ಲಿಯೇ ನೋಂದಣಿಗೆ ಮಹಿಳೆಯರು ಗುಂಪಾಗಿ ಬರುತ್ತಿದ್ದಾರೆ.

ಅರ್ಜಿ ಸಲ್ಲಿಕೆಗೆ ಕಾಲಮಿತಿ ಇಲ್ಲ. ಪಡಿತರ ಚೀಟಿಯಲ್ಲಿ ಗುರುತಿಸಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಯ ಮೊಬೈಲ್ ಸಂಖ್ಯೆಗೆ ನೋಂದಣಿ ದಿನಾಂಕ, ಸಮಯ ಹಾಗೂ ನೋಂದಣಿ ಕೇಂದ್ರದ ವಿವರಗಳನ್ನು ಎಸ್‌ಎಂಎಸ್ ಮೂಲಕ ತಿಳಿಸಲಾಗುತ್ತದೆ. ಈ ಬಗ್ಗೆ ಮಹಿಳೆಯರಿಗೆ ತಿಳಿಯದೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಿಡಿದು ಕರ್ನಾಟಕ ಒನ್ ಕೇಂದ್ರಗಳಲ್ಲಿ ನೋಂದಣಿಗೆ ಮುಗಿಬಿದ್ದಿದ್ದರು.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲ, ಮೊಬೈಲ್ ನಂಬರ್ ಲಿಂಕ್ ಇಲ್ಲ. ಆಧಾರ್‌ನಲ್ಲಿರುವಂತೆ ಪ್ಯಾನ್ ಕಾರ್ಡ್‌ನಲ್ಲಿ ಹೆಸರಿಲ್ಲದೆ ತಿದ್ದುಪಡಿಗಾಗಿ ಜನರು ಆನ್‌ಲೈನ್ ಸೇವಾ ಕೇಂದ್ರಗಳಲ್ಲಿ ನಿಂತು ಸರಿಪಡಿಸಲು ತೆರಳಿದರೆ ಸರ್ವರ್ ಸಮಸ್ಯೆ, ಕರೆಂಟ್ ಕಣ್ಣಾಮುಚ್ಚಾಲೆಯಿಂದ ಕಂಗೆಟ್ಟ ಹೋಗುವಂತಾಗಿದೆ. ಅನ್ನಭಾಗ್ಯಯೋಜನೆಯಲ್ಲಿ 5 ಕೆಜಿ ಅಕ್ಕಿ ಬದಲು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಿದ್ದರಿಂದ ಪಟ್ಟಣದ ವಿವಿಧ ಬ್ಯಾಂಕ್‌ಗಳಲ್ಲಿ ಮಾಹಿತಿ ತಿಳಿಯಲು ಮಹಿಳೆಯರ ನೂಕುನುಗ್ಗಲು ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net