ಗೃಹಲಕ್ಷ್ಮೀ ಯೋಜನೆ ಚಾಲನಾ ಕಾರ್ಯಕ್ರಮಕ್ಕೆ ಮಹಿಳೆಯರಿಗೆ ಆಹ್ವಾನ

ಕರಪತ್ರ ಹಂಚಿಕೆ
ಲಿಂಗಸುಗೂರು ಸಮೀಪದ ಸರ್ಜಾಪುರ ಗ್ರಾಮದಲ್ಲಿ ಗ್ರಾಪಂ ಸಿಬ್ಬಂದಿಗಳು ಮತ್ತು ಅಂಗನವಾಡಿ ನೌಕರರು ಮಹಿಳೆಯರಿಗೆ ಕರಪತ್ರ ನೀಡಿ ಆಹ್ವಾನಿಸಿದರು. ರೇಣುಕಾ ಕಲ್ಲೂರು, ಸಾವಿತ್ರಿ ದೇವಿ, ಮಂಜುಳಾ, ಅಮರಮ್ಮ, ಸುಲೋಚನಾ, ಗಿರಿಜಾ, ಸರಸ್ವತಿ, ಜ್ಯೋತಿ, ನೀಲಮ್ಮ, ಶರಣಮ್ಮ, ಕಲ್ಪನಾ ಇದ್ದರು.
Published on

ಲಿಂಗಸುಗೂರು: ಪಟ್ಟಣಕ್ಕೆ ಸಮೀಪದ ಸರ್ಜಾಪುರ ಗ್ರಾಪಂ ಮತ್ತು ಸಿಡಿಪಿಒ ಇಲಾಖೆಯಿಂದ ಗೃಹಲಕ್ಷ್ಮೀ ಯೋಜನೆ ಚಾಲನಾ ಕಾರ್ಯಕ್ರಮ ಪ್ರಯುಕ್ತ ಗ್ರಾಪಂ ಸಿಬ್ಬಂದಿಗಳು ಹಾಗೂ ಅಂಗನವಾಡಿ ನೌಕರರು ಮನೆ ಮನೆಗೆ ತೆರಳಿ ಮಹಿಳೆಯರಿಗೆ ಕರಪತ್ರ ಮೂಲಕ ಆಹ್ವಾನ ನೀಡಿದರು.

ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆಯಡಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂ. ನೀಡುವ ಯೋಜನೆ ಆ.30 ರಂದು ಮೈಸೂರಿನಲ್ಲಿ ಸಿಎಂ ಸಿದ್ಧರಾಮಯ್ಯ,

ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಸಚಿವರು ಲೋಕಾರ್ಪಣೆಗೊಳಿಸಲಿದ್ದು, ಫಲಾನುಭವಿಗಳು ಟಿವಿ ಮತ್ತು ಎಲ್‌ಇಡಿ ಪರದೆ ಮೇಲೆ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಸಂದೇಶ ಬರುವುದರಿಂದ ನೊಂದಾಯಿತ ಫಲಾನುಭವಿಗಳು ಮೊಬೈಲ್ ಫೋನ್‌ನೊಂದಿಗೆ ಹಾಜರಾಗಬೇಕೆಂದು ಮನವಿ ಮಾಡಿದರು. ರೇಣುಕಾ ಕಲ್ಲೂರು, ಸಾವಿತ್ರಿ ದೇವಿ, ಮಂಜುಳಾ, ಅಮರಮ್ಮ ನೀಲಮ್ಮ, ಶರಣಮ್ಮ, ಕಲ್ಪನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net