ಗೃಹಲಕ್ಷ್ಮೀ ಯೋಜನೆ ಸದುಪಯೋಗ ಪಡೆದುಕೊಳ್ಳಿ:ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಸಲಹೆ

snd
ಸಿಂಧನೂರಿನ ನಗರಸಭೆಯಲ್ಲಿ ಗೃಹಲಕ್ಷ್ಮೀ ಫಲಾನುಭವಿ ಮಹಿಳೆಗೆ ಬುಧವಾರ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಮಂಜೂರಾತಿ ಪತ್ರ ವಿತರಿಸಿದರು.
Published on

ಸಿಂಧನೂರು:ಗೃಹಲಕ್ಷ್ಮೀ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾಗಿದ್ದು, ಉಚಿತ ನೋಂದಣಿಗೆ ಮೂರು ಕೇಂದ್ರ ಆರಂಭಿಸಲಾಗಿದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಹೇಳಿದರು.


ಪಟ್ಟಣದ ನಗರಸಭೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ನೋಂದಣಿ ಕೇಂದ್ರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಅರ್ಜಿ ಸಲ್ಲಿಸಲು ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಆಧಾರ್‌ಗೆ ಜೋಡಣೆೆಯಾದ ಮೊಬೈಲ್ ಸಂಖ್ಯೆ ತರಬೇಕು. ನೋಂದಣಿ ಕೇಂದ್ರವು ಭಾನುವಾರ ಹೊರೆತುಪಡಿಸಿ, ಉಳಿದ ದಿನಗಳಲ್ಲಿ ತೆರೆದಿರುತ್ತವೆ. ಶಾಂತಿಯಿಂದ ಸರತಿ ಸಾಲಿನಲ್ಲಿ ನಿಂತು ನೋಂದಣಿ ಮಾಡಿಸಿಕೊಳ್ಳಬೇಕು ಎಂದರು. ನಗರಸಭೆ ಸಿಬ್ಬಂದಿಗಳಾದ ಸುನೀತಾ, ಶ್ರೀನಿವಾಸ ದೊರೆ, ಅಮರೇಶ, ಜನಕರಾಜ, ಮಣಿಕಂಠ, ಜಾವೀದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net