

ಹೊಸನಗರ: ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮೀ ಯೋಜನೆ ಮಹಿಳೆಯರ ಪಾಲಿನ ಭಾಗ್ಯಲಕ್ಷ್ಮೀಯಾಗಿದೆ ಎಂದು ಪಪಂ ಸದಸ್ಯೆ ಸಿಂಥಿಯಾ ಶೆರಾವೋ ಹೇಳಿದರು. ಪಟ್ಟಣದ ಪಪಂ ಸಭಾಂಗಣದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿ, ಇದು ದೇಶದ ಇತಿಹಾಸದಲ್ಲೇ ಕ್ರಾಂತಿಕಾರಕ ಯೋಜನೆಯಾಗಲಿದೆ ಎಂದರು. ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಮಾತನಾಡಿ, ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ, ನೋಂದಣಿ ಮಾಡಿಸುವ ಸೇವಾ ಕೇಂದ್ರದ ಸಿಬ್ಬಂದಿಗೆ ಸೂಚಿಸಿದರು. ಈ ವೇಳೆ ಮೈಸೂರಿನ ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು. ಪಪಂ ಸದಸ್ಯರಾದ ಹಾಲಗದ್ದೆ ಉಮೇಶ್, ಅಶ್ವಿನ್ ಕುಮಾರ್, ಗುಲಾಬಿ ಮರಿಯಪ್ಪ, ಚಂದ್ರಕಲಾ ನಾಗರಾಜ್, ಸಾಹೀನಾ ನಾಸಿರ್, ಮುಖ್ಯಾಧಿಕಾರಿ ಬಾಲಚಂದ್ರಪ್ಪ ಉಪಸ್ಥಿತರಿದ್ದರು.