ಗೃಹಲಕ್ಷ್ಮಿ ಹಣದಲ್ಲಿ ಬೋರ್‌ವೆಲ್ ಕೊರೆಸಿದ ಅತ್ತೆ-ಸೊಸೆ

14 GJD 1
Published on

ಗದಗ: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಕುರಿತು ದೇಶದಲ್ಲಿ ಪರ- ವಿರೋಧ ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಅತ್ತೆ-ಸೊಸೆ ಕೂಡಿಕೊಂಡು ಗೃಹಲಕ್ಷ್ಮಿ ಯೋಜನೆಯಿಂದ ದೊರೆತ ಹಣದಿಂದ ಬೋರ್‌ವೆಲ್ ಕೊರೆಸುವ ಮೂಲಕ ಗಮನ ಸೆಳೆದಿದ್ದಾರೆ.

ಜಿಲ್ಲೆಯ ಗಜೇಂದ್ರಗಡ ಪಟ್ಟಣದ ನಿವಾಸಿಯಾಗಿರುವ ಅತ್ತೆ ಮಾಬುಬೀ ಮಾಲಧಾರ, ಸೊಸೆ ರೋಷನ್ ಬೇಗ್ ಮಾಲಧಾರ ಅವರು ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿ ತಿಂಗಳು ಬರುತ್ತಿದ್ದ 2000 ರೂ. ದುಡ್ಡು ಕೂಡಿಟ್ಟಿದ್ದರು. ಬೋರ್‌ವೆಲ್ ಕೊರೆಯಿಸಲು ಒಟ್ಟು ಮೊತ್ತ 60 ಸಾವಿರ ರೂ. ಬೇಕಾಗಿತ್ತು. ಅದರಲ್ಲಿ ಅತ್ತೆ- ಸೊಸೆ ಕೂಡಿಟ್ಟ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬೋರ್‌ವೆಲ್ ಖರ್ಚಿಗೆ ತಮ್ಮ ಮಗನ ಕೈಗೆ ಹಣ ನೀಡಿ ಬೋರ್‌ವೆಲ್ ಕೊರೆಸಲು ಸಹಕಾರಿಯಾಗಿದ್ದಾರೆ. ಉಳಿದ ಹಣವನ್ನು ಮಗ ಹೊಂದಿಸಿ ಬೋರ್‌ವೆಲ್ ಖರ್ಚಿನ ಪೂರ್ಣ ಮೊತ್ತವನ್ನು ಕೊಟ್ಟಿದ್ದಾರೆ. ಇವರಿಗೆ 3 ಎಕರೆ ಜಮೀನು ಇದ್ದು, ಬೋರ್‌ವೆಲ್ ಕೊರಿಸಿದ್ದರಿಂದ ಕೊಳವೆಬಾವಿಯಲ್ಲಿ ನೀರು ಉಕ್ಕಿದೆ. ಇದರಿಂದ ಕುಟುಂಬ ಹರ್ಷಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net