ಸಿಲಿಂಡರ್ ಅಕ್ರಮ ಬಳಕೆಗೆ ಕಡಿವಾಣ ಬೀಳಲಿ: ಕರ್ನಾಟಕ ವಿಭಾಗದ ಮುಖ್ಯಸ್ಥ ಚೇತನ್‌ಕುಮಾರ್ ಒತ್ತಾಯ

Grihak Dakshata Kalyan Foundation Press Conference Mandya
Published on

ಮಂಡ್ಯ: ಗೃಹ ಬಳಕೆಯ ಸಿಲಿಂಡರ್‌ಗಳನ್ನು ಅಕ್ರಮವಾಗಿ ವಾಣಿಜ್ಯ ಹಾಗೂ ವಾಹನಗಳಲ್ಲಿ ಬಳಸುವುದನ್ನು ನಿಲ್ಲಿಸಲು ರಾಜ್ಯಸರ್ಕಾರ ಮುಂದಾಗಬೇಕು ಎಂದು ಗೃಹಕ್ ದಕ್ಷತ ಕಲ್ಯಾಣ್ ಪೌಂಡೇಷನ್‌ನ ಕರ್ನಾಟಕ ವಿಭಾಗದ ಮುಖ್ಯಸ್ಥ ಚೇತನ್‌ಕುಮಾರ್ ಒತ್ತಾಯಿಸಿದರು.

ಗೃಹ ಬಳಕೆಯ ಸಿಲಿಂಡರ್‌ಗಳು ಅಕ್ರಮವಾಗಿ ಕಾಳ ಸಂತೆಯಲ್ಲಿ ಅವ್ಯಹತವಾಗಿ ಮಾರಾಟ ಮಾಡಲಾಗುತ್ತಿದೆ. ವಾಹನಗಳ ಚಾಲನೆ ಹಾಗೂ ವಾಣಿಜ್ಯ ವಿಷಯವಾಗಿ ಬಳಸಿತ್ತಿರುವ ಘಟನೆಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಇದರಿಂದ ಸ್ಪೋಟದಂತಹ ಘಟನೆಗಳು ನಡೆಯುವ ಸಂಭವವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ಗೃಹ ಬಳಕೆಯ ಸಿಲಿಂಡರ್ ಗೃಹ ಬಳಕೆಗೆ ಮಾತ್ರ ಸೀಮಿತವಾಗಬೇಕೆಂದರೆ ಸರ್ಕಾರ ಕೂಡಲೇ ಇ-ಕೆವೈಸಿ ಮಾಡಿದ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಮೂಲಕ ಸಿಲಿಂಡರ್ ಬುಕ್ ಮಾಡುವಂತಹ ಹಾಗೂ ಸಿಲಿಂಡರ್ ತಲುಪಿಸುವಾಗ ಅಥೆಂಟಿಕ್ ಅಥವಾ ಬಾರ್ ಕೋಡ್ ಮೂಲಕ ರವಾನಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕ ವಿಭಾಗದ ಮುಖ್ಯಸ್ಥ ಅರುಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net