

ಶಿಕಾರಿಪುರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷಿ÷್ಮÃ ಯೋಜನೆಯ ನಗದು ವರ್ಗಾವಣೆ ಕಾರ್ಯಕ್ರಮವನ್ನು ಆ.30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು ಅದರ ನೇರಪ್ರಸಾರಕ್ಕೆ ತಾಲೂಕಿನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಪುರಸಭೆ ಮುಖ್ಯಾಽಕಾರಿ ಭರತ್ ತಿಳಿಸಿದರು.
ಭಾನುವಾರ ಶಿಕಾರಿಪುರ ಪುರಸಭೆ ಸಭಾಂಗಣದಲ್ಲಿ ಏರ್ಪಡಿದಿದ್ದ ಪೂರ್ವಸಭೆಯಲ್ಲಿ ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿ ಸಾಂಸ್ಕೃತಿಕ ಭವನ, ಶಿಕಾರಿಪುರ ತಾಲೂಕು ಪಂಚಾಯಿತಿ ಸಭಾಂಗಣ, ಪುರಸಭಾ ಸಭಾಂಗಣ ಮತ್ತು ಸರ್ಕಾರಿ ಐಟಿಐ ಕಾಲೇಜು ಗಗ್ರಿ ಬಡಾವಣೆಯಲ್ಲಿ ಫಲಾನುಭವಿಗಳು ಕಾರ್ಯಕ್ರಮ ನೇರಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲ ಕಡೆ ಎಲ್‌ಇಡಿ ಪರದೆ ಹಾಗೂ ಲಘು ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮನೆಗೆ ಸರ್ಕಾರದ ಸೂಚನೆಯಂತೆ ಕರಪತ್ರ ಹಂಚಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುವುದು ಎಂದು ತಿಳಿಸಿದರು.
ಸಿಡಿಪಿಒ ನಂದಕುಮಾರ್ ಮಾತನಾಡಿ, ಪ್ರತಿ ಮನೆಗೆ ಕರಪತ್ರ ವಿತರಿಸಲು, ಯೋಜನೆ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲು ಅಂಗನವಾಡಿ ಸಹಾಯಕಿಯರು, ಆಶಾ ಕಾರ್ಯಕರ್ತರು ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಪುರಸಭೆ ವ್ಯವಸ್ಥಾಪಕ ರಾಜ್‌ಕುಮಾರ್, ಸದಸ್ಯರಾದ ಮಹೇಶ್ ಹುಲ್ಮಾರ್, ಗೋಣಿಪ್ರಕಾಶ್, ಜಯಶ್ರೀ, ಹೇಮರಾಜ್, ಕಮಲಮ್ಮ ಹುಲ್ಮಾರ್, ಮಹಮದ್ ದಸ್ತಗೀರ್, ತೋಟಗಾರಿಕೆ ಸಹಾಯಕ ನಿರ್ದೇಶಕ ಪ್ರಭುಶಂಕರ್, ಪಿಡಬ್ಲು ್ಯಡಿ ಇಂಜಿನಿಯರ್ ಮಿಥುನ್, ಪುರಸಭೆ ಕಂದಾಯ ಅಽಕಾರಿ ಪರಶುರಾಮ್, ಅರುಣ್‌ಕುಮಾರ್, ಸೈಯದ್ ನವಾಜ್, ಸುರೇಶ್ ಇತರರಿದ್ದರು.