ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ

Hesom New
Published on

ಹುಬ್ಬಳ್ಳಿ : ಹೆಸ್ಕಾಂ ಹುಬ್ಬಳ್ಳಿ ಗ್ರಾಮೀಣ, ಕುಂದಗೋಳ ಹಾಗೂ ನವಲಗುಂದ ಉಪ ವಿಭಾಗದ ಕಚೇರಿಗಳಲ್ಲಿ ಜು. 20 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ ಹಮ್ಮಿಕೊಳ್ಳಲಾಗಿದೆ.

ಹುಬ್ಬಳ್ಳಿ ಗ್ರಾಮೀಣ ಉಪವಿಭಾಗ ವ್ಯಾಪ್ತಿಯ ಅಂಚಟಗೇರಿ, ಬ್ಯಾಹಟ್ಟಿ, ನೂಲ್ವಿ, ಶಿರಗುಪ್ಪಿ, ನವಲಗುಂದ ಉಪವಿಭಾಗದ ನವಲಗುಂದ ಪಟ್ಟಣ, ನವಲಗುಂದ ಗ್ರಾಮೀಣ, ಅಣ್ಣಿಗೇರಿ ಪಟ್ಟಣ ಹಾಗೂ ಅಣ್ಣಿಗೇರಿ ಗ್ರಾಮೀಣ, ಕುಂದಗೋಳ ಉಪವಿಭಾಗದ ಕುಂದಗೋಳ, ಸಂಶಿ ಹಾಗೂ ಗುಡಗೇರಿ ವಿಭಾಗದ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ಈ ಸಭೆಯಲ್ಲಿ ಭಾಗವಹಿಸಿ, ತಮ್ಮ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಬಹುದೆಂದು ಹೆಸ್ಕಾಂ ಹುಬ್ಬಳ್ಳಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕಿರಣಕುಮಾರ ಬಿ. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net