ಕನಕಗಿರಿಯಲ್ಲಿ ಹಲಗೆ ಸದ್ದು ಜೋರು

6KNK1
ಕನಕಗಿರಿ ಗಜಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ ಅಲಾಯಿ ದೇವರುಗಳು ಪರಸ್ಪರ ಆಲಂಗಿಸಿಕೊಂಡು ಮೊಹರಂಗೆ ವಿದಾಯ ಹೇಳಿದವು.
Published on

ಕನಕಗಿರಿ: ಮೊಹರಂ ಹಬ್ಬದ ನಿಮಿತ್ತ ಪಟ್ಟಣದ ನಾನಾ ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರುಗಳಿಗೆ ಭಾನುವಾರ ಸಂಜೆ ಶ್ರದ್ಧಾಭಕ್ತಿಯಿಂದ ವಿದಾಯ ಹೇಳಲಾಯಿತು.

ಪೀರಲು ದೇವರುಗಳಾದ ಹಟೇಲ ಭಾಷಾ, ಹುಸೇನ ಭಾಷಾ, ಹೊನ್ನೂರಭಾಷಾ, ಹಸೇನ ಭಾಷಾ, ಲಾಲಾಸಾಬ್, ಮೌಲಾಲಿ ಸೇರಿ ಇತರೇ ದೇವರುಗಳು ಹಬ್ಬದ ಕೊನೆಯ ದಿನ ಇಲ್ಲಿನ ರಾಜಬೀದಿಯಲ್ಲಿನ ಗಜಲಕ್ಷ್ಮಿ ದೇವಸ್ಥಾನ ಮುಂಭಾಗದಲ್ಲಿ ಸೇರಿದವು.

ಅಲಾಯಿ ದೇವರುಗಳು ಒಂದನ್ನೊಂದು ಪರಸ್ಪರ ಆಲಂಗಿಸಿಕೊಂಡವು. ದಫನ್‌ಗಾಗಿ ಹಳ್ಳಕ್ಕೆ ತೆರಳಿದವು. ಇದಕ್ಕೂ ಮೊದಲು ಅಲಾಯಿ ದೇವರುಗಳು ಭಕ್ತರ ಮನೆ ಮನೆಗೆ ತೆರಳಿ ಹರಕೆ ತೀರಿಸಿದವು. ಗಜಲಕ್ಷ್ಮೀ ದೇವಸ್ಥಾನ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು.

ಯುವಕರು ಹಲಗೆ ಬಾರಿಸುತ್ತಾ ಅಲಾಯಿ ಕುಣಿದರು. ರಸ್ತೆಯ ಇಕ್ಕೆಲಗಳಲ್ಲಿನ ಅಂಗಡಿ, ಮನೆಗಳ ಮಾಳಿಗೆಗಳ ಮೇಲೆ ಮಹಿಳೆಯರು ನೆರೆದಿದ್ದು, ಅಲಾಯಿ ದೇವರುಗಳ ವಿಸರ್ಜನೆ ಮುನ್ನಾದ ಸನ್ನಿವೇಶ ಕಣ್ತುಂಬಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net