

ಇಟಗಿ: ಬೂದು ನೀರು ನಿರ್ವಹಣೆ ಘಟಕ ಯೋಜನೆಯಡಿ ಖಾನಾಪುರ ತಾಲೂಕಿನಲ್ಲಿ ಇಟಗಿ, ಪಾರಿಶ್ವಾಡ ಮತ್ತು ನಂದಗಡ ಗ್ರಾಮಗಳು ಆಯ್ಕೆಯಾಗಿವೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಇಟಗಿ ಗ್ರಾಮದಲ್ಲಿ ಈಚೆಗೆ ಬೂದು ನೀರು ನಿರ್ವಹಣೆ ಘಟಕ ಯೋಜನೆಯಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮನರೇಗಾ ಯೋಜನೆಯಡಿ ಗ್ರಾಮದಲ್ಲಿ 1.21 ಕೋಟಿ ರೂ. ಮೊತ್ತದಲ್ಲಿ ಬೂದು ನೀರು ನಿರ್ವಹಣೆ ಘಟಕ ಕಾಮಗಾರಿ ನಡೆಯಲಿವೆ. ಬೂದು ನೀರು ಉತ್ಪಾದನೆಯಾಗುವ ಮನೆಗಳಿಂದ ಜಲಮೂಲ ಸೇರುವವರೆಗೆ ಸಿಸಿ ಚರಂಡಿ, ಸೇಫ್ಟಿಕ್ ಟ್ಯಾಂಕ್, ಬಚ್ಚಲು ಗುಂಡಿ, ಸಮುದಾಯ ಇಂಗುಗುಂಡಿ ಸೇರಿ ಇತರೆ ಘಟಕಗಳನ್ನು ನಿರ್ಮಿಸಲಾಗುತ್ತದೆ. ದ್ರವ ತ್ಯಾಜ್ಯವನ್ನು ವೈಜ್ಞಾನಿಕ ಮತ್ತು ತಾಂತ್ರಿಕ ಮಾದರಿಯಲ್ಲಿ ಸಂಸ್ಕರಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷ ರುದ್ರಪ್ಪ ತುರಮರಿ, ಉಪಾಧ್ಯಕ್ಷೆ ರಾಜಶ್ರೀ ಹುಣಶಿಕಟ್ಟಿ, ಪಿಡಿಒ ವೀರೇಶ ಸಜ್ಜನ, ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ, ಜನತಾ ಶಿಕ್ಷಣ ಪ್ರಸಾರ ಸಮಿತಿ ಕಾರ್ಯದರ್ಶಿ ಶ್ರೀಶೈಲ ತುರಮರಿ, ಎಂ.ಎಸ್. ಸಾಣಿಕೊಪ್ಪ, ಗ್ರಾಪಂ ಸದಸ್ಯರು ಹಾಗೂ ಇತರರು ಇದ್ದರು.