1974ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ

24 Dwd 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಅವರೆಲ್ಲ 50 ವರ್ಷಗಳ ಹಿಂದೆ ಸಹಪಾಠಿಗಳಾಗಿದ್ದವರು. ಕೆಲವರು ಉನ್ನತ ಹುದ್ದೆ ನಿರ್ವಹಿಸಿ ನಿವೃತ್ತರಾಗಿದ್ದದರೆ, ಮತ್ತೆ ಕೆಲವರು ಸ್ವಂತ ಉದ್ಯೋಗಿಗಳಾಗಿದ್ದಾರೆ. ಕಲಿಸಿದ ಗುರುಗಳನ್ನು ಸನ್ಮಾನಿಸುವ ಸಲುವಾಗಿ ಸಹಪಾಠಿಗಳೆಲ್ಲ ಮತ್ತೆ ಶಾಲೆಯಲ್ಲಿ ಸೇರಿದ್ದರು.

ಇಂಥ ಸ್ಮರಣೀಯ ಕಾರ್ಯಕ್ರಮ ನಡೆದದ್ದು ನಗರದ ಕರ್ನಾಟಕ ಎಜುಕೇಶನ್ ಬೋರ್ಡ್ನ ಕರ್ನಾಟಕ ಪ್ರೌಢಶಾಲೆಯಲ್ಲಿ. 1974ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ವೃಂದ ಶಾಲೆಯಲ್ಲಿ ಮಂಗಳವಾರ ಗುರುವಂದನೆ ಕಾರ್ಯಕ್ರಮ ಆಯೋಜಿಸಿತ್ತು. ಎಷ್ಟೋ ವರ್ಷಗಳ ನಂತರ ಭೇಟಿಯಾದ ಗೆಳೆಯರು ಶಾಲಾ ದಿನಗಳನ್ನು ಮೆಲುಕು ಹಾಕಿದರು. ಪರಸ್ಪರ ಕುಶಲೋಪರಿ ವಿಚಾರಿಸಿದರು.

`ಜೀವನ ಶಿಕ್ಷಣದ ಸ್ವರ್ಣ ಜಯಂತಿ'ಯನ್ನು ಸ್ಮರಣೀಯವಾಗಿಸುವ ಉದ್ದೇಶದಿಂದ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಅಂದಾಜು 2 ಲಕ್ಷ ರೂಪಾಯಿ ವೆಚ್ಚದ ವಿಶಿಷ್ಟ ಸ್ಮಾರ್ಟ್ ಬೋರ್ಡ್ ಅರ್ಪಿಸಿದರು.

ಕಲಿಸಿದ ಗುರುಗಳ ಎದುರು ಮತ್ತೊಮ್ಮೆ ವಿದ್ಯಾರ್ಥಿಗಳಾಗಿ ಪರಿಚಯ ಹೇಳಿಕೊಂಡರು. ಮಾತೃಸಂಸ್ಥೆಯಲ್ಲಿ ಕಲಿಸಿದ ಗುರುಗಳಾದ ಎನ್.ಜಿ. ಗಲಗಲಿ, ವಿ.ಕೆ. ಕಾಥವಟೆ, ಆರ್.ಡಿ. ಮುಸಳೆ, ಆರ್.ವಿ. ಚಿಮ್ಮಲಗಿ, ಕೆ.ಎಚ್. ಬಾಗೇವಾಡಿ ಅವರಿಗೆ ಹೃದಯಾಂತರಾಳದಿAದ ಗುರುವಂದನೆ ಸಲ್ಲಿಸಿ ಸನ್ಮಾನಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೆ.ಇ. ಬೋರ್ಡ್ ಸಂಸ್ಥೆಯ ಕಾರ್ಯಾಧ್ಯಕ್ಷ ಎಸ್.ಟಿ. ಪಾಟೀಲ ಮಾತನಾಡಿ, ಅದೆಷ್ಟೋ ಕನ್ನಡ ಮಾಧ್ಯಮ ಶಾಲೆಗಳು ಇಂದು ಮುಚ್ಚುವ ಸ್ಥಿತಿಯಲ್ಲಿವೆ. ನಮ್ಮ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಕಲಿತ ಶಾಲೆಗೆ ನಿರಂತರವಾಗಿ ನೆರವು ನೀಡುತ್ತ ಬಂದಿದ್ದಾರೆ. 1974ನೇ ಸಾಲಿನ ವಿದ್ಯಾರ್ಥಿಗಳು ಇಂದಿನ ಅಗತ್ಯತೆಯನ್ನು ಅರಿತು ಸ್ಮಾರ್ಟ್ ಬೋರ್ಡ್ ದೇಣಿಗೆ ನೀಡಿದ್ದಾರೆ. ಇದರ ಸದ್ಬಳಕೆಯಾಗಬೇಕು ಎಂದರು.

ಸAಸ್ಥೆಯ ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ, ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜಿ.ಆರ್. ಭಟ್ ಗೌರವ ಉಪಸ್ಥಿತರಿದ್ದರು. ಡಾ. ದಿನೇಶ ಪುರಾಣಿಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ ಎಂ. ಮಳಿಗಿ ನಿರೂಪಿಸಿದರು. ವಸಂತ ಪತ್ತಾರ ಸ್ವಾಗತಿಸಿದರು. ಶಾಲೆಯ ಪ್ರಾಚಾರ್ಯ ಎನ್.ಎನ್. ಸವಣೂರ ವಂದಿಸಿದರು.

ಹಳೇ ವಿದ್ಯಾರ್ಥಿಗಳಾದ ಶಿವರಾಜ ಹೊಸಮನಿ, ಅನಂತ ಬಾಡಕರ, ಅಶೋಕ ಕೋಟೂರ, ಶ್ರೀರಾಮ ಸಿಂದಗಿ, ಬಸವರಾಜ ಕಡಕೋಳ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net