ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ

05 sep tnp 02
Published on

ತಿ.ನರಸೀಪುರ: ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಪಟ್ಟಣದ ವಿದ್ಯೋದಯ ಪ್ರೌಢಶಾಲೆಯಲ್ಲಿ ಗುರುವಾರ ಪಾಠ ಕಲಿಸಿದ ಗುರುಗಳಾದ ಉಪ ಪ್ರಾಂಶುಪಾಲೆ ಬಿ.ಎಸ್. ಸುನಿತಾ ಅವರನ್ನು ಸೇವಾಶ್ರಯ ಫೌಂಡೇಷನ್ ನೇತೃತ್ವದಲ್ಲಿ ಹಳೇ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು.


ವಿದ್ಯೋದಯ ಪ್ರೌಢಶಾಲೆಯಲ್ಲಿ ಹಲವು ದಶಕಗಳಿಂದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಉಪ ಪ್ರಾಂಶುಪಾಲೆ ಆಗಿರುವ ಬಿ.ಎಸ್.ಸುನೀತಾ ಅವರ ಬೋಧನೆಯಿಂದ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿರುವ ಹಿನ್ನೆಲೆಯಲ್ಲಿ ಶಿಕ್ಷಕರ ದಿನಾಚರಣೆ ದಿನದಂದು ಹಳೇ ವಿದ್ಯಾರ್ಥಿಗಳು ಸನ್ಮಾನಿಸಿದರು.


ಸೇವಾಶ್ರಯ ಫೌಂಡೇಷನ್ ಅಧ್ಯಕ್ಷ ಮಣಿಕಂಠರಾಜ್‌ಗೌಡ ಮಾತನಾಡಿ, ನಮ್ಮೆಲ್ಲರ ಹೆಮ್ಮೆಯ ನೆಚ್ಚಿನ ಗುರುಗಳಾದ ಸುನೀತಾ ಅವರು ಶೈಕ್ಷಣಿಕ ಸೇವೆ ನಿಜಕ್ಕೂ ಸ್ಮರಣೀಯ. ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುವ ಸಂದರ್ಭದಲ್ಲಿ ನಮ್ಮ ಗುರುಗಳನ್ನು ಗೌರವಿಸಿ, ಸನ್ಮಾನಿಸುತ್ತಿದ್ದೇವೆ ಎಂದು ತಿಳಿಸಿದರು.


ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ದೈಹಿಕ ಶಿಕ್ಷಣ ಶಿಕ್ಷಕ ಜಯಪ್ಪ, ಹಳೇ ವಿದ್ಯಾರ್ಥಿಗಳಾದ ಬಾಗಳಿ ಯೋಗೇಶ್, ತಿರುಮಕೂಡಲು ದೀಪು, ಕೆ.ಎಸ್.ಜಗದೀಶ್, ರಚ್ಚು, ಚಂದ್ರು, ನಿಲಸೋಗೆ ದಿನೇಶ್, ನಾಗೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net