ಕೆರೆ ಸುತ್ತ ಹಸಿರೀಕರಣಕ್ಕೆ ಆದ್ಯತೆ

27 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಟಾಟಾ ಮೋಟಾರ್ಸ್​ ಬಾಡಿ ಸೊಲ್ಯೂಷನ್ಸ್​ ಲಿಮಿಟೆಡ್​ನ ಸಾಮಾಜಿಕ ಜವಾಬ್ದಾರಿ (ಸಿಎಸ್​ಆರ್​) ವಸುಂಧರಾ ಕಾರ್ಯಕ್ರಮದ ಭಾಗವಾಗಿ ತಾಲೂಕಿನ ನರೇಂದ್ರ ಗ್ರಾಮದ ಕೆರೆ ಸುತ್ತ 1000ಕ್ಕೂ ಹೆಚ್ಚು ಗಿಡಗಳನ್ನು ಶನಿವಾರ ನೆಡಲಾಯಿತು.
ಗ್ರಾಪಂ ಅಧ್ಯಕ್ಷ ನಾಗೇಶ ಹತ್ತಿಹೊಳಿ ಮಾತನಾಡಿ, ಕೆರೆ ಸುತ್ತ ಸಸಿಗಳನ್ನು ನೆಟ್ಟಿರುವುದರಿಂದ ಹಸಿರು ಹೆಚ್ಚಿಸಿದಂತಾಗಿದೆ. ಕಂಪನಿಯ ಗ್ರಾಮದಲ್ಲಿ ಹತ್ತು ಹಲವು ಯೋಜನೆಗಳನ್ನು ಕೈಗೊಂಡಿದೆ ಎಂದರು.
ಘಟಕದ ಮುಖ್ಯಸ್ಥ ವಿಜಯಸಿಂಗ್​ ಮಾತನಾಡಿ, ಕಂಪನಿಯು ತನ್ನ ಸಿಎಸ್​ಆರ್​ ಕಾರ್ಯಕ್ರಮಗಳ ಭಾಗವಾಗಿ ಸುತ್ತಲಿನ ಸಮುದಾಯಗಳಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಕೆರೆ ಸುತ್ತಲಿನ ಭಾಗ ಹಸಿರೀಕರಣ ಮಾಡುವುದರ ಜತೆಗೆ ಮಣ್ಣಿನ ಸವಕಳಿ ಕಡಿಮೆ ಮಾಡುವಂತಹ ಸಸಿಗಳನ್ನು ನೆಡಲಾಗಿದೆ. ಸಸಿಗಳನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ರವಿ ಕುಲಕರ್ಣಿ, ಗ್ರಾಪಂ ಸದಸ್ಯರು, ಟಿಎಂಬಿಎಸ್​ಎಲ್​ ನೌಕರರು, ಗ್ರಾಮಸ್ಥರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net