ಜಿಪಂನಿಂದ ಜಿಲ್ಲೆಯಲ್ಲಿ ಹಸಿರೀಕರಣ

zp building
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಗ್ರಾಮೀಣ ಪ್ರದೇಶದಲ್ಲಿ ಹಸಿರೀಕರಣ ಮೂಡಿಸಲು ವಿವಿಧ ಕಾಮಗಾರಿಗಳಿಗೆ ಒತ್ತು ನೀಡುತ್ತಿರುವ ಜಿಲ್ಲಾ ಪಂಚಾಯಿತಿಗೆ ಮಹತ್ಮಾಗಾಂಧಿ ನರೇಗಾ ಯೋಜನೆ ಅಸರೆಯಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಲವು ಗ್ರಾಮಗಳಲ್ಲಿ ಸಾಕಷ್ಟು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವ ಜಿಪಂ ಪುರುಷ ಮತ್ತು ಮಹಿಳೆಯರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಮಾನ ಕೂಲಿ ನೀಡುವ ಕಾರ್ಯಕ್ರಮದ ಮೂಲಕ ಹಸಿರೀಕರಣ ಮಾಡಲು ಹೊರಟಿದೆ. ಉದ್ಯೋಗ ಚೀಟಿ ಹೊಂದಿದ್ದವರಿಗೆ ಈ ಯೋಜನೆಯಡಿ 100 ದಿನದ ಕೆಲಸ ನೀಡುವ ಮಹತ್ವದ ಕಾರ್ಯಕ್ರಮದತ್ತ ಹೆಜ್ಜೆ ಇಟ್ಟಿದೆ.

ನೈಸರ್ಗಿಕ ಸಂಪನ್ಮೂಲ ನಿರ್ವಹಣೆ: 100 ಬದು ನಿರ್ಮಾಣ, 4 ಗೋಕಟ್ಟೆ ನಿರ್ಮಾಣ ಮತ್ತು ಹೂಳೆತ್ತುವುದು, 18 ಕಾಲುವೆ ನಿರ್ಮಾಣ, ಹೂಳೆತ್ತುವುದು, 9 ಕೆರೆ ನಿರ್ಮಾಣ, ಹೊಳೆತ್ತುವುದು, 2 ಕಲ್ಯಾಣಿ ನಿರ್ಮಾಣ ಮತ್ತು ಪುನಶ್ಚತನ ಕಾಮಗಾರಿಗಳನ್ನು ಮಾಡಲಾಗಿದ್ದು, ಬರೋಬ್ಬರಿ 37310 ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಜಿಪಂ ತಿಳಿಸಿದೆ.

ಜೀವನೋಪಾಯಕ್ಕೆ ಒತ್ತು: ತೋಟಗಾರಿಕಾ ಬೆಳೆ, ರೇಷ್ಮೆಗೆ ಸಂಬಂಧಿಸಿದಂತೆ, 316 ದನ, ಕುರಿ, ಹಸು, ಕೋಳಿ, ಹಂದಿ, ಇತರೆ ಜಾನುವಾರುಗಳ ಕೊಟ್ಟಿಗೆಗೆ 378 ಕಾಮಗಾರಿಗಳನ್ನುನಡೆಸಲಾಗಿದೆ. ಇದರಿಂದ 163845 ಮಾನವದಿನಗಳನ್ನು ಸೃಜಿಸಿದ್ದು, ನರೇಗಾ ಯೋಜನೆಯಡಿ ಹಸಿರೀಕರಣ, ಜೀವನೋಪಾಯ ಹಾಗೂ ಸಮಗ್ರನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿ ನರೇಗಾ ಯೋಜನೆಯನ್ನು ಯಶಸ್ವಿ ಅನುಷ್ಠಾನವಾಗಿದ್ದು, ಅಭಿವೃದ್ಧಿಕೆಲಸಗಳನ್ನು ಮುಂದುವರೆಸಲಾಗುತ್ತಿದೆ.

ಹಸಿರೀಕರಣ: ಕೃಷಿ ಅರಣೀಕರಣಕ್ಕೆ ಸಂಬಂಧಿಸಿದ 28 ಕಾಮಗಾರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಗಿಡನೆಡುವ ಕಾಮಗಾರಿ, ರಸ್ತೆಬದಿ ನೆಡುತೋಪು, ಅರಣ್ಯ ಪ್ರದೇಶದಲ್ಲಿ ಕಂದಕಗಳ ನಿರ್ಮಾಣ ಹಾಗೂ ವೃಕ್ಷವನ ಕಾಮಗಾರಿ ನಡೆಸುತ್ತಿದೆ. ಗ್ರಾಮೀಣ ಜನರ ಜೀವನೋಪಾಯಕ್ಕೆ ಅನುಕೂಲವಾಗುವಂತಹ ಕಾಮಗಾರಿಗಳ ಬಗ್ಗೆ ಗಮನಹರಿಸಿದ್ದು, ತೋಟಗಾರಿಕೆ ಬೆಳೆಗಳು, ರೇಷ್ಮೆಕ್ಷೇತ್ರದ ಕಾಮಗಾರಿಗಳು ಹಾಗೂ ದನ, ಕುರಿಕೊಟ್ಟಿಗೆ ನಿರ್ಮಾಣಕ್ಕೆ ಒತ್ತು ನೀಡಿದೆ. ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಮುದಾಯ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಅದರಲ್ಲೂ ಪ್ರಧಾನವಾಗಿ ನೈಸರ್ಗಿಕ ನಿರ್ವಾಹಣೆ ಕಾಮಗಾರಿಗಳಿಗೆ ಒತ್ತು ನೀಡಲಾಗುತ್ತಿದೆ. ಕೃಷಿ ಅರಣೀಕರಣ, ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವುದು, ರಸ್ತೆ ಬದಿ ನಡುತೋಪು, ಅರಣ್ಯ ಪ್ರದೇಶಗಳಲ್ಲಿ ಕಂದಕಗಳ ನಿರ್ಮಾಣ, ವೃಕ್ಷವನ ಅಥವಾ ಪವಿತ್ರವನ ಕಾಮಗಾರಿಗಳನ್ನು ಆದ್ಯತೆಯಾಗಿ ಹಸಿರೀಕರಣಕ್ಕೆ ಪರಿಗಣಿಸಲಾಗಿದೆ.

ಪರಿಸರ ಹಸಿರುಮಯ: ಪರಿಸರವನ್ನು ಹಸಿರುಮಯ ಮಾಡುವುದೇ ಹಸಿರೀಕರಣ, ಇದರಲ್ಲಿ ಗಿಡಗಳನ್ನು ನೆಡುವುದು, ಅರಣ್ಯಗಳನ್ನು ಬೆಳೆಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಹಸಿರು ಪ್ರದೇಶಗಳನ್ನು ಸೃಷ್ಟಿಸುವುದು ಸೇರಿವೆ. ತುಮಕೂರು ನರೇಗಾ ಯೋಜನೆಯಡಿಯಲ್ಲಿ ಇಂತಹ ಹಸಿರೀಕರಣ ಕಾಮಗಾರಿಗಳಿಗೆ ಒತ್ತು ನೀಡಲಾಗುತ್ತಿದೆ. ರೈತರು ತಮ್ಮ ಜಮೀನುಗಳಲ್ಲಿ ಗಿಡಗಳನ್ನು ಬೆಳೆಸುವುದು. ಉದ್ಯಾನವನಗಳು, ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡುವುದು. ರಸ್ತೆಗಳ ಅಂಚಿನಲ್ಲಿ ಗಿಡಗಳನ್ನು ನೆಟ್ಟು ತೋಪುಗಳನ್ನು ಬೆಳೆಸುವುದು. ಅರಣ್ಯದಲ್ಲಿ ನೀರು ಸಂಗ್ರಹಿಸಲು ಮತ್ತು ಮಣ್ಣಿನ ಸವಕಳಿ ತಡೆಯಲು ಕಂದಕಗಳನ್ನು ನಿರ್ಮಿಸುವುದು.ಪವಿತ್ರ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ವೃಕ್ಷವನಗಳನ್ನು ಬೆಳೆಸುವುದು. ನಗರೀಕರಣ ಭರದಲ್ಲಿ ಹಸಿರುವಲಯ ಕಣ್ಮರೆಯಾಗುತ್ತಿದ್ದು, ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ, ಜೀವವೈವಿಧ್ಯತೆಗೂ ಆತಂಕ ತಂದೊಡ್ಡಿದೆ ಈ ಹಿನ್ನೆಲೆಯಲ್ಲಿ ಹಸಿರೀಕರಣ ಎನ್ನವುದು ಪ್ರಮುಖವಾಗಿದ್ದು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ನರೇಗಾ ಯೋಜನೆಯಡಿ ಹಸಿರೀಕರಣ ಕಾಮಗಾರಿಗಳನ್ನು ಆರಂಭಿಸಿದೆ.

ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಹಸಿರೀಕರಣ ಕಾಮಗಾರಿಗಳನ್ನು ಕೈಗೊಂಡಿದ್ದು, ಮುಖ್ಯವಾಗಿ ಗ್ರಾಮೀಣ ಜನರ ಬದುಕಿಗೆ ಆಸರೆಯಾಗುವಂತಹ ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ. ಹಸಿರೀಕರಣ ಕಾಮಗಾರಿಗಳಿಂದ ಪರಿಸರ ಸಮತೋಲನ ಕಾಪಾಡಲು, ಹವಾಮಾನ ಬದಲಾವಣೆ ತಡೆಯಲು, ಮತ್ತು ಜೀವವೈವಿಧ್ಯತೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ.

ಡಾ.ಕೆ.ಎನ್.ಅನುರಾಧಾ, ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net