ಹೆಸರು ಬಿತ್ತನೆಗೆ ಸಕಾಲ

RSK
Published on

ನರೇಗಲ್ಲ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಮುಂಗಾರು ಬಿತ್ತನೆಗೆ ಬೀಜ ವಿತರಣೆ ಸಮಾರಂಭ ಜರುಗಿತು.

ರೋಣ ಸಹಾಯಕ ಕೃಷಿ ನಿರ್ದೇಶಕ ರವೀಂದ್ರಗೌಡ ಪಾಟೀಲ ಮಾತನಾಡಿ, ‘ಮುಂಗಾರು ಪೂರ್ವ ಮಳೆ ಚೆನ್ನಾಗಿ ಬಿದ್ದಿದೆ. ಇದು ಹೆಸರು ಬಿತ್ತನೆಗೆ ಅನುಕೂಲವಾಗಿದೆ. ಸರ್ಕಾರ ಕೂಡ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿದೆ. ರೈತರು ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಬಿತ್ತನೆ ಕಾರ್ಯ ಪ್ರಾರಂಭಿಸಬಹುದು’ ಎಂದರು.

ಕೃಷಿ ಅಧಿಕಾರಿ ಬಸವರಾಜ ಗದಗಿನ ಮಾತನಾಡಿ, ನರೇಗಲ್ಲ ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು, ಗೋವಿನ ಜೋಳ, ಸೂರ್ಯಕಾಂತಿ, ಸಜ್ಜೆ ಬಿತ್ತನೆ ಬೀಜಗಳು ಲಭ್ಯವಿವೆ. ಹೆಸರು ಬೀಜ ಪಡೆಯುವ ಸಾಮಾನ್ಯ ರೈತರು 575 ರೂ.ಗಳನ್ನು ಮತ್ತು ಎಸ್‌ಸಿಎಸ್‌ಟಿ ರೈತರು 512.5 ರೂ.ಗಳನ್ನು ನೀಡಿ ಬಿತ್ತನೆ ಬೀಜಗಳನ್ನು ಪಡೆಯಬಹುದು ಎಂದರು.

ಪ.ಪಂ. ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಶಿವನಗೌಡ ಪಾಟೀಲ, ಶರಣಯ್ಯ ಮಾಸ್ತಗಟ್ಟಿ, ಶರಣಪ್ಪ ಬೆಟಗೇರಿ, ಸಿ.ಕೆ. ಕಮ್ಮಾರ, ಮುದುಕಪ್ಪ ಬೆಟಗೇರಿ, ಚನ್ನಬಸಪ್ಪ ಹಡಪದ, ಬಸಪ್ಪ ಹೊಗರಿ, ಚನ್ನಬಸಪ್ಪ ಕುಷ್ಟಗಿ, ಶಿವಕುಮಾರ ಮಾವಿನಕಾಯಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net