

ಕುಂದಾಪುರ: ಮಾರ್ಕೆಟ್ ರಸ್ತೆಯ ನಾಗಬೊಬ್ಬರ್ಯ ದೇವಸ್ಥಾನದಲ್ಲಿ ಫೆ.2ರಂದು ನಡೆಯುವ ನಾಗಮಂಡಲೋತ್ಸವ ಪ್ರಯುಕ್ತ ಶುಕ್ರವಾರ ಹಸಿರುವಾಣಿ ಸಮರ್ಪಿಸಲಾಯಿತು.
ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ನಾಗಮಂಡಲ ಸೇವಾಕರ್ತರಾದ ಕೃಷ್ಣಯ್ಯ ಶೇರಿಗಾರ್ ಹಾಗೂ ಸದಾಶಿವ ಶೇರಿಗಾರ್ ಪೂಜೆ ಸಲ್ಲಿಸಿದರು. ಶ್ರೀ ಕುಂದೇಶ್ವರ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ಯಡಿಯಾಳ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ನಾಗರಾಜ್ ನಾಯ್ಕ, ಕುಂದಾಪುರ ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಶ್ರೀಧರ್ ಶೇರುಗಾರ್, ಶಶಿರಾಜ್ ಪೂಜಾರಿ, ಉದ್ಯಮಿ ಅಶೋಕ್ ಬೆಟ್ಟಿನ್, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷ ಮತ್ತು ಸದಸ್ಯರು, ನಾಗಬೊಬ್ಬರ್ಯ ದೇವಸ್ಥಾನದ ಸಮಿತಿ ಸದಸ್ಯರು, ಮಹಿಳಾ ಮಂಡಳಿ ಸದಸ್ಯೆಯರು ಪಾಲ್ಗೊಂಡಿದ್ದರು.