ಹಸಿರು ತೋರಣ ಗೆಳೆಯರ ಬಳಗಕ್ಕೆ ಆಯ್ಕೆ

Published on

ಮುದ್ದೇಬಿಹಾಳ: ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜಿಲ್ಲಾಡಳಿತದ ಪ್ರಶಸ್ತಿಗೆ ಭಾಜನವಾಗಿರುವ ಇಲ್ಲಿನ ಹಸಿರು ತೋರಣ ಗೆಳೆಯರ ಬಳಗಕ್ಕೆ 2025ನೇ ಸಾಲಿಗಾಗಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಗೌರವಾಧ್ಯಕ್ಷರಾಗಿ ಜಿ.ಎಂ.ಹುಲಗಣ್ಣಿ, ಅಧ್ಯಕ್ಷರಾಗಿ ಬಿ.ಎಚ್.ಬಳಬಟ್ಟಿ, ಕಾರ್ಯದರ್ಶಿಯಾಗಿ ಅಮರೇಶ ಗೂಳಿ, ಉಪಾಧ್ಯಕ್ಷರಾಗಿ ಸೋಮಶೇಖರ ಚೀರಲದಿನ್ನಿ, ಖಜಾಂಚಿಯಾಗಿ ಅಶೋಕ ರೇವಡಿ, ಸಂಚಾಲಕರಾಗಿ ಮಹಾಬಲೇಶ್ವರ ಗಡೇದ, ಸಹ ಕಾರ್ಯದರ್ಶಿಯಾಗಿ ವೀರೇಶ ಹಂಪನಗೌಡರ ಈಚೆಗೆ ಹುಡ್ಕೋದ ಉದ್ಯಾನದಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಬಳಗದ ಮಾಜಿ ಅಧ್ಯಕ್ಷರಾದ ಕೆ.ಆರ್.ಕಾಮಟೆ, ನಾಗಭೂಷಣ ನಾವದಗಿ, ಬಿ.ಎಸ್.ಮೇಟಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಡಾ.ವೀರೇಶ ಇಟಗಿ, ಕಾರ್ಯಕಾರಿ ಮಂಡಳಿಯ ಸದಸ್ಯರಾದ ತಾಪಂ ಮಾಜಿ ಸದಸ್ಯ ಶ್ರೀಶೈಲ ಮರೋಳ, ಮಲ್ಲಿಕಾರ್ಜುನ ಬಾಗೇವಾಡಿ, ಸುರೇಶ ಕಲಾಲ, ರವಿ ತಡಸದ, ಬಿ.ಎಂ.ಪಲ್ಲೇದ, ವಿಲಾಸ ದೇಶಪಾಂಡೆ, ಎಚ್.ವೈ.ಪಾಟೀಲ, ವಿಶ್ವನಾಥ ನಾಗಠಾಣ, ಕಿರಣ ಕಡಿ, ಡಾ.ವಿಜಯಕುಮಾರ ಗೂಳಿ, ಡಾ.ಉತ್ಕರ್ಷ ನಾಗೂರ, ಬಿ.ಎ.ನಾಡಗೌಡ, ಬಸವರಾಜ ಸಿದರಡ್ಡಿ, ಡಾ.ಸಿ.ಕೆ.ಶಿವಯೋಗಿಮಠ, ಪರಶುರಾಮ ಕೂಡಗಿ, ಪುಟ್ಟು ಕಡಕೋಳ ಇನ್ನಿತರರು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net