ಗ್ರೀನ್ ರೇಟಿಂಗ್ ಟೂಲ್ ತರಬೇತಿ

architecture
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಕಿಟೆಕ್ಚರ್​ನ 7ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಗ್ರಿಹ ಸಂಸ್ಥೆಯ ಸಹಯೋಗದೊಂದಿಗೆ ಗ್ರೀನ್ ರೇಟಿಂಗ್ ಟೂಲ್ ಕುರಿತು 3 ದಿನಗಳ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸ್ಕೂಲ್ ಆಫ್ ಅರ್ಕಿಟೆಕ್ಚರ್ ಮುಖ್ಯಸ್ಥ ಡಾ. ವಿನಯ ಹಿರೇಮಠ ಮಾತನಾಡಿ, ಸುಸ್ಥಿರ ಮತ್ತು ಪರಿಸರ ಸ್ನೇಹಿ ವಾಸ್ತುಶಿಲ್ಪಕ್ಕಾಗಿ ಹಾಗೂ ಸಂಯುಕ್ತ ರಾಷ್ಟ್ರಗಳ ಸುಸ್ಥಿರ ಗುರಿಗಳನ್ನು ಸಾಧಿಸಲು ಹೆಚ್ಚುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಸಿದ್ಧರಾಗಬೇಕು. ಭವಿಷ್ಯದ ನಿರ್ವಣಗಳಲ್ಲಿ ಹಸಿರು ಕಟ್ಟಡ ವಿನ್ಯಾಸ ಮಹತ್ವ ಪಡೆಯಲಿದೆ ಎಂದರು.

ಹಸಿರು ಕಟ್ಟಡ ವಿನ್ಯಾಸ, ಇಂಧನ ದಕ್ಷತೆ, ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ನವೀಕರಿಸಬಹುದಾದ ಇಂಧನಗಳ ಬಳಕೆ, ಇತ್ಯಾದಿ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು. ಗ್ರಿಹ (ಜಿಆರ್​ಐಎಚ್​ಎ-ಗ್ರೀನ್ ರೇಟಿಂಗ್ ಫಾರ್ ಇಂಟಿಗ್ರೆಟೆಡ್ ಹ್ಯಾಬಿಟೇಟ್ ಅಸೇಸಮೆಂಟ್) ಮಾನದಂಡಗಳಿಗೆ ವಿರುದ್ಧವಾಗಿ ಕಟ್ಟಡದ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಅಗತ್ಯವಾದ ಉಪಕರಣ ಹಾಗೂ ತಂತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲಾಯಿತು.

ಗ್ರಿಹ ತರಬೇತುದಾರ ಎಂ. ಜೀವನ, ಅರ್ಜುನ ಬಾಬು, ಎನ್. ವೀಣಾ, ಸ್ಕೂಲ್ ಆಫ್ ಆರ್ಕಿಟೆಕ್ಚರ್​ನ ಸಹಾಯಕ ಪ್ರಾಧ್ಯಾಪಕ ಸೌರಭ ನರೇಂದ್ರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net