ವಸುಂಧರಾ ವನಮಹೋತ್ಸವ

IMG-20250803-WA0015-1.jpg
Published on

ಹುಬ್ಬಳ್ಳಿ: ಇಲ್ಲಿಯ ವಸುಂಧರಾ ಫೌಂಡೇಷನ್ ಹಾಗೂ ಅಕ್ಷಯ ಕಾಲನಿ ರೆಸಿಡೆಂಟ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಭಾನುವಾರ ಅಕ್ಷಯ ಕಾಲನಿಯ ಬೃಂದಾವನ ಪಾರ್ಕ್ ನಲ್ಲಿ ವನಮಹೋತ್ಸವ ಅಂಗವಾಗಿ 50ಕ್ಕೂ ಹೆಚ್ಚು ವಿವಿಧ ತಳಿಯ ಸಸಿಗಳನ್ನು ನೆಡಲಾಯಿತು.

ಶಾಸಕ ಮಹೇಶ ಟೆಂಗಿನಕಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೇಘರಾಜ ಕೆರೂರ, ಮಾಜಿ ಮೇಯರ್ ವೀಣಾ ಬರದ್ವಾಡ, ವಿವೇಕಾನಂದ ಮೋಕಾಶಿ, ಹೇಮಂತ ಬೆಲ್ಲದ, ತೋಟಪ್ಪ ನಿಡಗುಂದಿ, ಶಿವಬಸಪ್ಪ ಕೋರಿ, ಈರಪ್ಪ ಘಂಟಿ, ವಿರೇಶ ಮಹಾಂತೇಶ ಗಾಯದ, ನಿವಾಸಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net