ಹಸಿರು ಮಾರ್ಗದಲ್ಲಿ ಫೆ.16ಕ್ಕೆ ಸಂಚಾರ ವ್ಯತ್ಯಯ

Metro 28 dec 19
Published on

ಬೆಂಗಳೂರು: ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿಯನ್ನು ಬಿಎಂಆರ್​ಸಿಎಲ್ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ (ಫೆ.16) ಆರ್.ವಿ. ರಸ್ತೆ ನಿಲ್ದಾಣದಿಂದ ಯಲಚೇನಹಳ್ಳಿ (ಹಸಿರು ಪಥ) ನಿಲ್ದಾಣವರೆಗೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ.

ಕನಕಪುರ ರಸ್ತೆಯಲ್ಲಿ ಯಲಚೇನಹಳ್ಳಿ ನಿಲ್ದಾಣದಿಂದ ಅಂಜನಾ ಪುರದವರೆಗೆ 2ನೇ ಹಂತದ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಈ ಮಾರ್ಗದಲ್ಲಿ ಹಳಿ ಅಳವಡಿಕೆ ಪೂರ್ಣಗೊಂಡಿದ್ದು, ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿ ಭಾನುವಾರ ಆರಂಭವಾಗಲಿದೆ. ಆರ್.ವಿ. ರಸ್ತೆಯಿಂದ ಬನಶಂಕರಿ, ಜೆ.ಪಿ. ನಗರ, ಯಲಚೇನಹಳ್ಳಿ ನಿಲ್ದಾಣದವರೆಗೆ ರೈಲು ಸೇವೆ ಸ್ಥಗಿತಗೊಳಿಸಲಾಗುತ್ತದೆ. ನಾಗಸಂದ್ರ, ಮೆಜೆಸ್ಟಿಕ್​ನಿಂದ ಆರ್.ವಿ. ರಸ್ತೆ ನಿಲ್ದಾಣದವರೆಗೆ ಮಾತ್ರ ಸಂಚಾರ ಇರಲಿದೆ. ಸೋಮವಾರ ಎಂದಿನಂತೆ ಮುಂಜಾನೆ 5 ಗಂಟೆಯಿಂದ ರೈಲು ಸೇವೆ ಲಭ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net