ಹಸಿರು ಹು-ಧಾ ಕ್ಕೆ ಚಾಲನೆ

hasiru HD
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸಂಗೊಳ್ಳಿ ರಾಯಣ್ಣನಗರದ ಉದ್ಯಾನದಲ್ಲಿ ಶನಿವಾರ ‘ಹಸಿರು ಹುಬ್ಬಳ್ಳಿ-ಧಾರವಾಡ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕ್ರೆಡೈ ಹುಬ್ಬಳ್ಳಿ-ಧಾರವಾಡ ಶಾಖೆ ಹಾಗೂ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಉದ್ಯಾನದಲ್ಲಿ ಗಿಡಗಳನ್ನು ನೆಡಲಾಯಿತು. ಹುಡಾ ಅಧ್ಯಕ್ಷ ಶಾಕೀರ ಸನದಿ, ಆಯುಕ್ತ ಸಂತೋಷ ಬಿರಾದಾರ, ಕ್ರೆಡೈ ಹು-ಧಾ ಅಧ್ಯಕ್ಷ ಗುರುರಾಜ ಅಣ್ಣಿಗೇರಿ, ಇಸ್ಮಾಯಿಲ್ ಸಂಸಿ, ಅಮೃತ ಮೆಹರವಾಡೆ, ಇತರರು ಗಿಡ ನೆಟ್ಟರು.

ಪಾಲಿಕೆಯ ನಗರ ಯೋಜನೆ ಉಪ ನಿರ್ದೇಶಕ ಪ್ರಜ್ಞಪ್ರಕಾಶ, ಕ್ರೆಡೈ ಹಸಿರು ಯೋಜನೆಯ ಸಂಚಾಲಕ ಶಿವಣ್ಣ ಪಾಟೀಲ, ಸಹ ಕಾರ್ಯದರ್ಶಿ ಅರ್ಬಾಸ್ ಸಂಸಿ, ಶ್ರೀಪಾದ ಶೇಜವಾಡ್ಕರ್, ಸಹ ಖಜಾಂಚಿ ಆಕಾಶ ಹಬೀಬ್, ಸುರೇಶ ಶೇಡವಾಡ್ಕರ್, ಆರ್. ಶಿವಣ್ಣ, ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ಬಡಾವಣೆಯ ಹಿರಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net