ಹುಬ್ಬಳ್ಳಿಯಲ್ಲಿ ಹೆಸರು ಖರೀದಿ ಆರಂಭ

IMG_20241007_210602_276.jpg
Published on

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಎಪಿಎಂಸಿ ಆವರಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂದಲ್ಲಿ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಆರಂಭಿಸಲಾದ ಖರೀದಿ ಕೇಂದ್ರದಲ್ಲಿ ಸೋಮವಾರ ಹೆಸರುಕಾಳು ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಶಾಸಕ ಎನ್.ಎಚ್. ಕೋನರಡ್ಡಿ ತಕ್ಕಡಿಗೆ ಪೂಜೆ ಸಲ್ಲಿಸಿ ಖರೀದಿಗೆ ಚಾಲನೆ ನೀಡಿದರು. ರೈತರು ತಾವು ಬೆಳೆದ ಹೆಸರುಕಾಳು ಮಾರಾಟ ಮಾಡಲು ತಮ್ಮ ಹೆಸರು ನೋಂದಾಯಿಸಿದವರು ಎಫ್ಎಕ್ಯೂ ಗುಣಮಟ್ಟದ ಉತ್ಪನ್ನ ತರಬೇಕು. ಈ ಮೂಲಕ ಕೇಂದ್ರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಸಹಕಾರಿ ಸಂಘದ ಚೇರ್ಮನ್ ಜಿ.ಆರ್. ಮೂಲಗಿ, ವೈಸ್ ಚೇರ್ಮನ್ ಜಿ.ಎಲ್. ಹೊಂಬಳ, ನಿರ್ದೇಶಕರಾದ ಬಿ.ಡಿ. ನಾಗನಗೌಡ್ರ, ವಿ.ಎಸ್. ಕೆಂಚನಗೌಡ್ರ, ಸಿ.ಜಿ. ಪಾಟೀಲ, ಸಿ.ಸಿ. ಪಾಟೀಲ, ಎಂ.ಪಿ. ಸೂರಣಗಿ, ಜೆ.ಪಿ. ಸಿದ್ದನಗೌಡ್ರ, ಎಸ್.ಎ್. ಹಿರೇಮಠ, ಡಿ.ಕೆ. ನಲವಡಿ, ಸಿ.ಬಿ. ಅಸುಂಡಿ. ಆರ್.ವೈ. ಪಾಟೀಲ, ಎಸ್.ಎನ್. ಹಿತ್ತಲಮನಿ, ಎಪಿಎಂಸಿ ಮಾಜಿ ಸದಸ್ಯ ಆರ್.ವೈ. ಕೆಂಪಲಿಂಗನಗೌಡ್ರ, ರೈತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net